ನಮ್ಮೊಳಗೆ ಪ್ರವೇಶಿಸಬೇಡ. ನಮ್ಮ ನಡುವೆ ನಿನ್ನ ಸಂಬಂಧವನ್ನು ಇಟ್ಟುಕೊಳ್ಳಬೇಡ. ನಾವು ನಮ್ಮಷ್ಟಕ್ಕೆ ಬದುಕುತ್ತೇವೆ. ನಾವು ಇನ್ನೊಂದಷ್ಟು ಹೆಚ್ಚು ವರ್ಷ ಬದುಕುವ ಆಯಸ್ಸನ್ನು ಹೊಂದುತ್ತೇವೆ. ನಿನ್ನಿಂದಾಗಿ ನಾವು ಬೇಗ ಸಾಯುವ ಸ್ಥಿತಿಗೆ ತಲುಪಿದ್ದೇವೆ. ಈ ಮಾನವ ನಿನ್ನ ಪರಿಧಿಯೆಲ್ಲಿದೆಯೋ ಅಲ್ಲೇ ಬದುಕಿ ಬಿಡು .ನೀನು ಬದುಕಿದ ಸ್ಥಳದಲ್ಲಿ ಪ್ರಕೃತಿಯಾದ ನಾವು ನೆಮ್ಮದಿಯಾಗಿ ಉಸಿರಾಡಲು ಸಾಧ್ಯವಾಗ್ತಾಯಿಲ್ಲ. ಸಮುದ್ರ ಕೊಳೆಯಾಗಿದೆ ನದಿಗಳು ಮಲಿನವಾಗಿದೆ ಗಾಳಿ ಹಾಳಾಗಿದೆ ಗಿಡಗಳು ಬೇರಿಳಿಸಿ ಬೆಳೆಯುವುದಕ್ಕಾಗದೆ ಕೆರೆಗಳು ನೀರಿಲ್ಲದೆ ಬಾಯಾರುತ್ತಿದೆ. ನೀನಿಲ್ಲದಿದ್ದಾಗ ನಾವು ಅದ್ಭುತವಾಗಿ ಬದುಕುತ್ತಿದ್ವಿ. ಎಲ್ಲ ಸಂಬಂಧಗಳು ಚೆನ್ನಾಗಿ ಎಲ್ಲರೂ ಆಗಾಗ ಭೇಟಿಯಾಗುತ್ತಿದ್ದೆವು. ಆದರೆ ನೀನು ನಮ್ಮ ನಡುವೆ ಪ್ರವೇಶಿಸಿ ನಮ್ಮ ಸಾವಿಗೆ ಮಾರಣ ಹೋಮಕ್ಕೆ ಕಾರಣವಾಗಿದ್ದೀಯ. ನಿನ್ನಿಂದಾಗಿ ಬದುಕುವ ಆಸೆ ಕಳೆದುಕೊಂಡಿದ್ದೇವೆ. ಆದರೆ ನೆನಪಿಟ್ಟುಕೋ, ನಾವು ಸತ್ತರೆ ನೀನು ಬದುಕುವುದು ಸಾಧ್ಯವೇ ಇಲ್ಲ. ನಮಗೆ ಬದುಕುವುದಕ್ಕೆ ಅವಕಾಶ ಕೊಡು ನಮ್ಮ ಇಷ್ಟದಂತೆ. ಪ್ರಕೃತಿಯ ಕೋರಿಕೆಯನ್ನ ಮುಂದಿಟ್ಟಿದ್ದೇನೆ ತೀರ್ಮಾನ ನಿಮಗೆ ಬಿಟ್ಟದ್ದು.
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!