ತೂಗುತ್ತಿದ್ದೇನೆ ಜಗವಾಳುವ ಕೈಯನ್ನ ಮನವಾಳುವ ಮುದ್ದು ಮಗುವನ್ನು. ನಾನು ಈ ಮನೆಯ ಮೊದಲ ಮಗುವನ್ನು ಎತ್ತಾಡಿಸಿದ ನಂತರ ಬದುಕು ನಿಲ್ಲಲಿಲ್ಲ. ನಾನವರಿಗೆ ಮೊದಲ ಆಶ್ರಯವಾಗಿದ್ದೆ ಹಾಗೆ ಮನೆಗಳನ್ನ ದಾಟಿ ದಾಟಿ  ಯಾರಿಗೂ ಬೇಡವಾಗಿ ಎಲ್ಲೋ ಒಂದು ಕತ್ತಲೆ ಕೋಣೆಯೊಳಗೆ ಮುಳುಗಿಬಿಟ್ಟಿದೆ. ಎಷ್ಟು ಕೂಗಿ ಕರೆದರೂ ಯಾರಿಗೂ ಕೇಳಿಸುತ್ತಿಲ್ಲ.

ನನಗೆ ನನ್ನ ಮನೆ ಸೇರಬೇಕು, ದೈವ ನಿರ್ಣಯವೋ ಏನೋ ಹಾಗಾಗಿ ನಾ ಕತ್ತಲೆಯ ಕೋಣೆಯೊಳಗೆ ಬೆಳಕೊಂದು ಬಂದು ನನ್ನನ್ನು ಹುಡುಕಿ ನನ್ನ ಮೊದಲಿದ್ದ ಮನೆಗೆ ತಂದುಬಿಟ್ಟರು. ನಾನು ಒಂದಷ್ಟು ನನ್ನ ಅಂದ ಚಂದಗಳನ್ನು ಬಣ್ಣ ಬದಲಿಸಿಕೊಂಡು ಈ ಮನೆಯ ನನ್ನ ಮೊದಲ ಮಗುವಿನ ಮಗುವನ್ನು ಎತ್ತಾಡಿಸುವ ಜವಾಬ್ದಾರಿ ನನ್ನದು. ಮತ್ತೆ ಸಂಭ್ರಮ ಖುಷಿಯಿಂದ ತಯಾರಾಗಿದ್ದೇನೆ. ಕಷ್ಟವನ್ನು ಎದುರಿಸುವ ಶಕ್ತಿ ಸಿಗಲಿ ಪ್ರಯತ್ನಿಸಿದರೆ ಎಲ್ಲವೂ ಸಿಗುವಂತಾಗಲಿ ಕಣ್ಣೀರಿಗೂ ಬೆಲೆ ಸಿಗುವಂತಾಗಲಿ, ಅನ್ನೋದು ನನ್ನ ಆಶಯವಷ್ಟೇ ನಾನು ತೊಟ್ಟಿಲಾಗಿ ಎತ್ತಾಡಿಸಿದ್ದೇನೆ ನನ್ನೊಳಗಿನಿಂದ ಎದ್ದು ನಿಂತವರು ಜಗತ್ತನ್ನ ಎತ್ತಾಡಿಸಬೇಕಷ್ಟೆ.

- ಧೀರಜ್ ಬೆಳ್ಳಾರೆ                                  

ಚಿತ್ರ ಕೃಪೆ: ಇಂಟರ್ನೆಟ್ ತಾಣ