ಅಜ್ಜ, ನಾನು ಇವತ್ತು ಕಾಲೇಜಿಗೆ ಹೋಗೋದಿಲ್ಲ. ಯಾವುದೋ ಪ್ರವಾಸ ಆಯೋಜನೆ ಮಾಡಿದ್ದಾರೆ. ಅದರಿಂದ ಮನೆಯಲ್ಲಿ ಇದ್ದು ಬಿಡುವುದು ಒಳ್ಳೆಯದು ತಾನೆ? ಇಲ್ಲಪ್ಪಾ, ನಿನಗೆ ಪ್ರವಾಸದ ಮಹತ್ವ ಅರ್ಥವಾಗಿಲ್ಲ. ಕಳೆದುಕೊಂಡವರಿಗೆ ಮೌಲ್ಯ ತಿಳಿಯದೆ ಹೋದಾಗ ಕಳೆದುಕೊಂಡ ಭಾವ ಅರ್ಥವೇ ಆಗುವುದಿಲ್ಲ. ಕೆಲವೊಂದು ಅವಕಾಶಗಳು ಹುಡುಕಿ ಬರುತ್ತವೆ. ಬದುಕಿನ ನೆನಪಿನ ಬುಟ್ಟಿಗೆ ಒಂದೆರಡು ಹೊಸ ವಿಚಾರಗಳನ್ನು ತುಂಬಿಸಿಕೊಳ್ಳುವ ಅವಕಾಶವೂ ಇರುತ್ತದೆ ಆದರೆ ವೈಯಕ್ತಿಕ ಆಲೋಚನೆಗಳು ಅರ್ಥ ರಹಿತ ವಿಚಾರಗಳು ಇದರಿಂದ ಅದ್ಭುತ ಕ್ಷಣಗಳು ಕೈ ತಪ್ಪಿ ಹೋಗಿರುತ್ತದೆ. ಇದನ್ನ ಅರ್ಥ ಮಾಡಿಕೊಳ್ಳುವ ತುರ್ತು ಸ್ಥಿತಿಯಲ್ಲಿ ನಾವಿದ್ದೇವೆ. ಪಡೆದುಕೊಳ್ಳುವ ಅವಕಾಶ ಇದ್ದಾಗ ಯಾವತ್ತೂ ಹೆಜ್ಜೆ ಹಿಂದೆ ಇಡಬಾರದು. ನೀವೆಲ್ಲರೂ ಜೊತೆಯಾಗಿ ಬದುಕುವ ಕ್ಷಣವದು. ಅದನ್ನು ಕಳೆದುಕೊಳ್ಳಬಾರದು. ಅಜ್ಜನ ಮಾತು ಮನ ಮುಟ್ಟಿದ ಕಾರಣ ಆತ ಪ್ರವಾಸಕ್ಕೆ ಹೊರಟಿದ್ದ.

- ಧೀರಜ್ ಬೆಳ್ಳಾರೆ                                  

ಚಿತ್ರ ಕೃಪೆ: ಇಂಟರ್ನೆಟ್ ತಾಣ