ನಾನು ನಿರಾಕಾರನಾಗಿರುವುದೇ ಇದಕ್ಕೆ ಪ್ರತಿಯೊಂದು ಕ್ಷಣವನ್ನು ಪ್ರತಿಯೊಂದು ಕಡೆಯಿಂದಲೂ ನಿಂತು ನೋಡುವುದಕ್ಕೆ . ಹಾಗಾಗಿ ನೀನು ಚಿಂತಿಸಬೇಡ ಒಳಿತೋ ಕೆಡುಕೋ ಸರಿಯೋ ತಪ್ಪೋ ನಿನ್ನಂತರಂಗದಲ್ಲಿ ಕುಳಿತು ನಾನು ನಿರ್ಧರಿಸುತ್ತೇನೆ. ನಿನಗೆ ಗೌರವ ಸಿಗದಿರಬಹುದು, ಸೋಲು ಎದುರಾಗಬಹುದು ಮೋಸವಾಗಬಹುದು ಏನೇ ಆದರೂ ಅದರ ಹಿಂದೆ ನಾನು ನಿಂತು ನೋಡುತ್ತಿದ್ದೇನೆ ಪ್ರಯತ್ನಕ್ಕೆ ಫಲ ಸಿಗದೇ ಹೋದಾಗ ಅದಕ್ಕೆ ತಕ್ಕದಾದ ಫಲ ನಿನ್ನನ್ನ ಹುಡುಕಿ ಬರುವ ಹಾಗೆ ನಾನು ನಿರ್ವಹಿಸುತ್ತೇನೆ ನಂಬಿಕೆ ಇಟ್ಟು ಹೆಜ್ಜೆ ಇಡುವುದು ಅಷ್ಟೇ ನಿನ್ನ ಕೆಲಸ ಪ್ರತಿಯೊಂದು ಕಣ್ಣ ಹನಿಗೂ ಬೆಲೆ ಸಿಗುತ್ತದೆ. ನಿನ್ನಂತರಂಗ ಏನು ಹೇಳುತ್ತೋ ಹಾಗೆ ಬದುಕುವುದನ್ನು ಕಲಿತುಕೋ ನಾನು ನಿನ್ನ ಜೊತೆ ಇರುತ್ತೇನೆ ಬೆಂಗಾಲಾಗಿರುತ್ತೇನೆ ಈ ಮಾತು ಹೆಚ್ಚು ಹೆಜ್ಜೆಗಳನ್ನ ದೂರ ಇಡೋದಕ್ಕೆ ಧ್ವನಿಯು ಪ್ರೇರೇಪಣೆ ನೀಡಿತು. ನಿಮಗೂ ಕೇಳಬಹುದು ಮೌನದಲ್ಲಿ ಪಿಸುಮಾತನ್ನ ಕೇಳಿ ನೋಡಿ.

- ಧೀರಜ್ ಬೆಳ್ಳಾರೆ                                  

ಚಿತ್ರ ಕೃಪೆ: ಇಂಟರ್ನೆಟ್ ತಾಣ