ಅವನು ಕನ್ನಡಿಯ ಮುಂದೆ ನಿಂತು ತನ್ನನ್ನ ತಾನು ನೋಡಿಕೊಳ್ಳುತ್ತಿದ್ದಾನೆ. ತಾನು ಯೋಚಿಸಿದ್ದು ತಾನಾಗಿರದೆ ಇರೋದಕ್ಕೆ ಬೇಸರವಿದೆ ಅವನಿಗೆ, ಅವನು ಅವನನ್ನು ನೋಡಿದ ರೀತಿ ಬೇರೆ, ಅವನ ಒಳಗಿನ ಆಲೋಚನೆಗಳು ಅವನನ್ನು ನೋಡಿದ ರೀತಿ ಬೇರೆ, ಅವನೊಳಗಿನ ಪ್ರತಿಭೆ ಅವನನ್ನ ವಿವೇಚಿಸಿದ ರೀತಿ ಬೇರೆ ,ಹೀಗೆ ಪ್ರತಿಯೊಬ್ಬರೂ ಅವನನ್ನ ವಿವಿಧ ಆಯಾಮಗಳಲ್ಲಿ ಚಿತ್ರಿಸಿದ್ದರೂ ಕೂಡ ಆತ ಅವರ ಯಾವುದೇ ಆಲೋಚನೆಗಳಿಗೆ ಒಗ್ಗದೇ ಒಬ್ಬಂಟಿಯಾಗಿ ಬಿಟ್ಟಿದ್ದಾನೆ. ಸಂಬಂಧವಿಲ್ಲದ ಕಡೆ ಮುಗುತೂರಿಸಿ ಅನಗತ್ಯ ವಿಚಾರವನ್ನು ತಲೆಗೆ ತೆಗೆದುಕೊಂಡು ಬಲವಿಲ್ಲದ ಕೆಲಸವನ್ನು ನಿರ್ವಹಿಸಿ. ಬರಿಯ ಸಮಯ ಸಾಗಾಣಿಕೆಗೆ ಸಂದರ್ಭಗಳನ್ನು ಸೃಷ್ಠಿಸಿಕೊಂಡು ಸುಮ್ಮನೆ ಬದುಕುತ್ತಿದ್ದಾನೆ . ಆವನಿರುವ ಹಾಗೆ ಬದುಕುವವರು ಸಾವಿರ ಇದ್ದಾರೆ, ಅವನಿಗೆ ಅವರೆಲ್ಲರಿಗಿಂತ ವಿಭಿನ್ನವಾಗಿ ಬದುಕುವ ಸಾಮರ್ಥ್ಯವಿದ್ದರೂ ಕೂಡ ಆತ ಅಲ್ಲೇ ಉಳಿದುಬಿಟ್ಟಿದ್ದಾನೆ .ಹೆಜ್ಜೆಗಳು ಇಡುವ ಅವಕಾಶವಿದೆ ಸಾಮರ್ಥ್ಯವಿದೆ ಸಾಧ್ಯತೆಗಳಿದೆ ಜೊತೆಗಿದ್ದಾರೆ ಎಲ್ಲವೂ ಇದ್ದರೂ ಕೂಡ ಆತ ಅಲ್ಲೇ ಉಳಿದಿರುವುದು ಕನ್ನಡಿಯೇ ತನ್ನನ್ನು ಮರೆಮಾಚಿಕೊಂಡು ಆತನನ್ನ ಆತನಿಗೆ ತೋರಿಸಲು ಅಸಹ್ಯ ಪಡುತ್ತಿದೆ. ಇನ್ನಾದರೂ ಆತನಿಗೆ ಬುದ್ಧಿ ಬರದೇ ಹೋದರೆ ಮತ್ತೆ ಯಾವಾಗ ಬರುತ್ತೋ ಗೊತ್ತಿಲ್ಲ?
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!