ಪ್ರತಿಯೊಂದು ಮನೆಯ ಗೋಡೆಯ ಮೇಲೆ ಕನ್ನಡಿಯೊಂದಿರಬೇಕು, ಅಲ್ಲಿ ನಾವು ನಮ್ಮ ಮುಖವನ್ನು ನೋಡುವಾಗ ನಮ್ಮೊಳಗಿನ ಭಾವನೆಗಳು ಕನ್ನಡಿಯಲ್ಲಿ ಬಂದು ಕಾಣುವಂತಾಗಬೇಕು. ನಮ್ಮ ಮನಸ್ಸು ಆಲೋಚಿಸುವ ರೀತಿ ಒಳಿತು ಕೆಡುಕುಗಳೆಲ್ಲವೂ ಕೂಡ ಕಣ್ಣ ಮುಂದೆ ಬಿತ್ತರವಾಗಬೇಕು, ಒಳಿತಿನಿಂದ ಕೆಡುಕಿನಿಂದ ಮುಂದಾಗಬಹುದಾದ ಅನಾಹುತಗಳು ಒಳಿತುಗಳು ಕಣ್ಣ ಮುಂದೆ ಕಾಣುವಂತಿರಬೇಕು, ನಮ್ಮ ಒಳ್ಳೆಯ ಆಲೋಚನೆಗಳು ಮಾತ್ರ ನಮ್ಮ ಮುಖಕ್ಕೆ ಸೌಂದರ್ಯವನ್ನು ನೀಡಬೇಕು, ಕೆಟ್ಟ ಆಲೋಚನೆಗಳು ಹೆಚ್ಚಾದಷ್ಟು ಮುಖ ವಿಕಾರಗೊಳ್ಳಬೇಕು ಇಂತಹ ಕನ್ನಡಿಗಳು ಇದ್ದಾಗ ಮಾತ್ರ ಜಗತ್ತು ಬದಲಾಗುತ್ತದೆ, ವ್ಯಕ್ತಿ ಬದಲಾಗ್ತಾನೆ. ಹಾಗಾಗಿ ಕನ್ನಡಿ ಹುಡುಕುತ್ತಿದ್ದೇನೆ ಹುಡುಕಿ ಕೊಡುವಿರಾ?
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!