ಅವಳ ಬದುಕದು ಕನಸಿನ ರಾಶಿ ಅವಳ ಕನಸಿನ ಪಟ್ಟಿ ತುಂಬಾ ದೊಡ್ಡದಿದೆ. ಆದರೆ ಒಂದು ದಿನವೂ ಅವಳಿಗೆ ಕನಸು ಈಡೇರುವುದಿಲ್ಲ ಅಂತ ಅನಿಸಿಯೇ ಇಲ್ಲ. ಅವಳ ಬದುಕಿನ ಆಸೆಗಳ ಪಟ್ಟಿಯಲ್ಲಿ ಎಲ್ಲವೂ ಈಡೇರಲೇ ಬೇಕೆಂಬ ಹಠ ಅವಳಿಗಿದೆ. ಅವಳ ಪುಟ್ಟ ಬದುಕು ತುಂಬಾ ಅದ್ಭುತವಾಗಿದೆ. ಅವಳಿಗೆ ಹೊಸತನ್ನ ತಯಾರಿಸುವುದು ಇಷ್ಟ. ತನ್ನಲ್ಲಿದ್ದದನ್ನ ಹಲವರಿಗೆ ಹಂಚುವುದಿಷ್ಟ, ಮನೆಯನ್ನ ಸ್ವಚ್ಚವಾಗಿಡುವುದು ಇಷ್ಟ, ಪುಟ್ಟ ಗಿಡಗಳ ಜೊತೆ ಮಾತನಾಡುವುದು ಇಷ್ಟ, ಮಾಡುವ ಕೆಲಸವನ್ನು ಅಚ್ಚುಕಟ್ಟಾಗಿ ಮುಗಿಸಬೇಕೆಂಬ ಇಷ್ಟ. ಇವೆಲ್ಲವನ್ನೂ ಪ್ರತಿ ದಿನವೂ ಮಾಡ್ತಾ ಮಾಡ್ತಾ ಕನಸುಗಳ ಹೆಜ್ಜೆಗಳನ್ನ ಒಂದೊಂದು ಈಡೇರಿಸ್ತಾ ಬಂದಿದ್ದಾಳೆ. ಇನ್ನೊಂದಷ್ಟು ಕನಸುಗಳು ಬಾಕಿ ಉಳಿದಿವೆ ಆಕೆಗೆ ನಂಬಿಕೆ ಇದೆ ಅದನ್ನು ಈಡೇರಿಸುತ್ತೇನೆ ಎಂಬ ಭಗವಂತನು ಜೊತೆಯಾಗಿದ್ದಾನೆ, ಅವಳ ಒಳ್ಳೆಯತನಕ್ಕೆ ಅವಳಿಗೆ ಖಂಡಿತ ಒಳ್ಳೆಯದಾಗುತ್ತದೆ. ದಿನಗಳಷ್ಟೇ ಕಾಯುತ್ತಿವೆ ಅವಳಿಗಾಗಿ…
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!