ಕೋಟೆಯ ಕಲ್ಲುಗಳು ಮಾತನಾಡಬೇಕಿತ್ತು, ಆಗ ಪ್ರತಿಯೊಬ್ಬರ ಕಥೆಯೂ ಜಗತ್ತಿಗೆ ಪರಿಚಯವಾಗ್ತಾ ಇತ್ತು. ಈಗ ಎಲ್ಲ ರಾಜರ ಕಥೆಗಳು ಇತಿಹಾಸಕಾರರು ಬಿಟ್ಟು ಹೋದ ಹಾಗೆ ರಾಜರು ಕಟ್ಟು ಹಿಡಿದು ಹೇಳಿಸಿದ ಹಾಗೆ ನಮ್ಮ ಕಿವಿಗೆ ಕಣ್ಣುಗಳಿಗೆ ತಲುಪುತ್ತಿವೆ. ಆದರೆ, ಆ ಕೋಟೆಯ ಪ್ರತಿಯೊಂದು ಕಲ್ಲುಗಳು ಕಥೆ ಹೇಳಿದಿದ್ರೆ ಅವನ ಮೋಸ ವಂಚನೆ. ಆತನ ಪರಾಕ್ರಮ ಮುಚ್ಚಿಟ್ಟ ಸತ್ಯ ಆತನಿಗೆ ಎದುರಾದ ಸಂಶಯ ಇವೆಲ್ಲವೂ ಕೂಡ ಕಣ್ಣೆದುರು ಬಯಲಾಗ್ತಾ ಇತ್ತು. ಆ ರಾಜ್ಯದ ಒಳಗಡೆ ನಡೆದ ಸಣ್ಣಪುಟ್ಟ ಘಟನೆಗಳು ರಾಜ್ಯ ಅಧಪತನಕ್ಕೆ ಕಾರಣವಾದ ಸನ್ನಿವೇಶಗಳು ಒಳಗೊಳಗೆ ನಡೆಯುತ್ತಿದ್ದ ಮೋಸ ಅಸೂಯೆ, ಎಲ್ಲವೂ ಬಟಾ ಬಯಲಾಗ್ತಾ ಇತ್ತು ಅದಕ್ಕೆ ಕಲ್ಲಿಗೆ ಮಾತನಾಡಬಾರದು ಅಂತ ಹೇಳಿಬಿಟ್ಟಿದ್ದರೇನು ಈಗಲೂ ಕಲ್ಲುಗಳು ಕಥೆ ಹೇಳುವುದಕ್ಕೆ ಅಲ್ಲಲ್ಲಿ ನಿಂತುಬಿಟ್ಟಿದೆ ಆದರೆ ಯಾರೂ ಮಾತುಕೊಟ್ಟಿಲ್ಲ. ಕಲ್ಲುಗಳು ಕಾಯುತ್ತಿವೆ... ಮಾತು ಆಡಲು…

- ಧೀರಜ್ ಬೆಳ್ಳಾರೆ                                  

ಚಿತ್ರ ಕೃಪೆ: ಇಂಟರ್ನೆಟ್ ತಾಣ