ಹಲವು ವರ್ಷಗಳಿಂದ ದಿನವೂ ದೇವರ ಧ್ಯಾನ ಮಾಡುತ್ತಿದ್ದ, ಮನೆಯಿಂದ ಹೊರಗೆ ಹೊರಡದೆ ಮನಸ್ಸನ್ನು ಸ್ಥಿಮಿತದಲ್ಲಿಟ್ಟುಕೊಂಡು ದೇವರನ್ನ ಕಾಣುವ ಕೆಲಸದಲ್ಲಿ ನಿರತನಾಗಿದ್ದ. ಎಷ್ಟೇ ಸಮಯ ಕಳೆದರೂ ಮನಸ್ಸು ಹಿಡಿತಕ್ಕೆ ಸಿಕ್ತಾ ಇಲ್ಲ ದೇವರು ಇವನ ಮಾತನ್ನು ಕೇಳ್ತಾ ಇದ್ದಾನೆ ಅಂತ ಅನ್ನಿಸ್ತಾನೇ ಇಲ್ಲ.ಕಾರಣವೇನು ಅಂತ ಗೊತ್ತಾಗ್ಲಿಲ್ಲ ನೇರವಾಗಿ ಅಪ್ಪನ ಬಳಿ ಬಂದು ಯಾಕೆ ನನಗೆ ಹೀಗೆ ಆಗ್ತಿದೆ ಅಂತ ಕೇಳಿದ್ದಕ್ಕೆ ಅಪ್ಪ ನೇರವಾಗಿ  ಉತ್ತರ ಕೊಡಲಿಲ್ಲ. ದಿನ ನಮ್ಮ ಮನೆಯ ಮುಂದಿನದ ಹಾದು ಹೋಗಿ ಅಲ್ಲೊಂದಿರುವ ಸಣ್ಣ ಓಣಿಯಲ್ಲಿ ದಾಟಿ ನಮ್ಮೂರನ್ನು ತಿರುಗಿ ಮತ್ತೆ ಮನೆಗೆ ಬಾ ನಿನಗೆ ಉತ್ತರ ಕೊಡುತ್ತೇನೆ. ಆತ ಹೊರಟಿದ್ದ ಮತ್ತೆ ಮನೆಗೆ ತಲುಪಿದಾಗ ದೇಹದಲ್ಲಿ ಸುಸ್ತಿತ್ತು ಮುಖದ ಭಾವ ಬದಲಾಗಿತ್ತು ಕಾರಣ ಕೇಳಿದಾಗ ದಾರಿಯಲ್ಲಿ ಹೋಗ್ತಾ ಇರೋರೆಲ್ಲ ಯಾರಿಗೂ ನಿಧಾನದ ಬಗ್ಗೆ ಅರಿವೇ ಇಲ್ಲ ಒಬ್ಬರಿಗೊಬ್ಬರು ತೊಂದರೆ ಕೊಡುವವರು ಶಾಂತವಾಗಿ ಬದುಕನ್ನು ಕಾಣದವರು ನಾನು ಒಂದಷ್ಟು ಜನರು ಜೊತೆ ಜಗಳ ಬೈಗುಳ ಎಲ್ಲವನ್ನು ಮಾಡಿ ಇಲ್ಲಿಗೆ ತಲುಪಿದ್ದೆ ಹಾಗಾಗಿ ಇಷ್ಟೊಂದು ಸುಸ್ತು ಅಂತಂದು ಬಿಟ್ಟ. ಅಪ್ಪ ನಕ್ಕು ನಿನಗೆ ನಿನ್ನ ಮನಸನ್ನ ಹಿಡಿತದಲ್ಲಿಟ್ಟುಕೊಳ್ಳುವುದಕ್ಕೆ ಸಾಧ್ಯವಾಗದವನು ಭಗವಂತನನ್ನ ಕಾಣುವುದಕ್ಕೆ ಹೇಗೆ ಸಾಧ್ಯ. ಹಾಗಾಗಿ ಮೊದಲು ಸಮಾಜದೊಳಗೆ ಒಂದಾಗಿ ಬದುಕುವುದನ್ನು ಕಲಿ ಅಂದುಬಿಟ್ರು.

- ಧೀರಜ್ ಬೆಳ್ಳಾರೆ                                  

ಚಿತ್ರ ಕೃಪೆ: ಇಂಟರ್ನೆಟ್ ತಾಣ