ಹಾಗೆ ಊಟ ಮಾಡುವಾಗ ಸಾಂಬಾರಿನಲ್ಲಿದ್ದ ಸಣ್ಣ ಕಡ್ಡಿಯೊಂದು ಹಲ್ಲಿನ ಮಧ್ಯದಲ್ಲಿ ಸಿಕ್ಕಿಹಾಕಿಕೊಂಡಿತು. ದಿನಗಳು ಮೂರು ದಾಟಿದೆ ಅದ್ಭುತವಾದ ರುಚಿ ರುಚಿಯಾದ ಊಟ ಕಣ್ಣ ಮುಂದೆ ಇದ್ದರೂ ಕೂಡ ಮನಸ್ಸು ಅದರ ಕಡೆ ಹೋಗ್ತಾ ಇಲ್ಲ, ನನಗೆ ಮತ್ತೆ ಅದೇ ಕಡ್ಡಿಯನ್ನು ಹಲ್ಲಿನ ಮಧ್ಯದಿಂದ ಸ್ಪರಿಶಿಸುತ್ತಿದೆ. ಎಷ್ಟೇ ಸಂಭ್ರಮದ ಕ್ಷಣಗಳು ಕಣ್ಣ ಮುಂದೆ ಕಂಡರೂ ಮನಸ್ಸಿನಲ್ಲಿರುವ ಪ್ರಶ್ನೆ ಈ ಕಡ್ಡಿ ಹೊರಗೆ ಬರ್ತಾ ಇಲ್ಲ ಅನ್ನೋದೇ. ಅದ್ಭುತ ಸನ್ನಿವೇಶಗಳು ಮನಸ್ಸು ಖುಷಿಗೊಳ್ಳುವ ಎಷ್ಟೋ ವಿಷಯಗಳು ನಡೆದರೂ ಆ ಕಡ್ಡಿಯೊಂದು ಎಲ್ಲವನ್ನು ಹಾಳು ಮಾಡ್ತಾ ಇದೆ. ಕಡ್ಡಿ ಹೊರಗೆ ಹೋಗುವವರೆಗೂ ಕಷ್ಟ ತಪ್ಪಿದ್ದಲ್ಲ, ಹೀಗೇ ಬದುಕಲ್ಲಿ ಅಲ್ವಾ?

- ಧೀರಜ್ ಬೆಳ್ಳಾರೆ                                  

ಚಿತ್ರ ಕೃಪೆ: ಇಂಟರ್ನೆಟ್ ತಾಣ