ಜೋರು ಮಳೆಗೆ ಮರದ ಪಕ್ಕ ಇಟ್ಟಿದ್ದ ಸಣ್ಣ ಛತ್ರಿಯ ಒಳಗೆ ಪುಟ್ಟ ಅಂಗಡಿಯವೊಂದರ ಬಳಿ ನಿಂತು ಚರುಂಬರಿಯನ್ನು ಸವಿಯುತ್ತಿದ್ದೆ. ಬದುಕಿನ ಕಥೆ ಅವರ ಉಪ್ಪು ಖಾರಗಳ ಜೊತೆ ಮಿಶ್ರಣವಾಗಿತ್ತು. ನಾನು ಕಾಂಟ್ರಾಕ್ಟ್ ತೆಗೆದುಕೊಳ್ಳುತ್ತಿದ್ದೆ. ದೊಡ್ಡ ದೊಡ್ಡ ಬಿಲ್ಡಿಂಗ್ ಗಳಿಗೆ ಬಣ್ಣ ಹಚ್ಚಿ ಬದುಕಟ್ಟಿಕೊಂಡಿದ್ದೆ. ಸಮಯಗಳು ದಾಟಿದ ಹಾಗೆ ಕೆಲಸ ಮಾಡಿಸಿಕೊಂಡರೆ ಹೊರತು ದುಡ್ಡು ನನ್ನ ಕೈ ತಲುಪಲೇ ಇಲ್ಲ. ನನ್ನ ಕುಟುಂಬದವರ ಜೊತೆ ಸಮಯ ಕಳೆಯುವುದು ಆಗಲಿಲ್ಲ ಬದುಕನ್ನ ಬದುಕಬೇಕು ಅಂತ ಅಂದುಕೊಂಡವನಿಗೆ ಬದುಕು ದುಡ್ಡಿನ ಹಿಂದೆ ಓಡುವಂತೆ ಮಾಡಿತು. ಮನೆಯವರ ಅಳು ನಗು ಪ್ರೀತಿ ಕೋಪ ಯಾವುದೂ ಸಿಗಲೇ ಇಲ್ಲ. ಬದುಕು ಬದಲಾಗಬೇಕು ಅಂತ ಅನ್ನಿಸಿ ಆ ಕೆಲಸವನ್ನೇ ನಿಲ್ಲಿಸಿ ನಾಲ್ಕೈದು ಡಬ್ಬಿಗಳನ್ನು ಇಟ್ಟುಕೊಂಡು ಚುರುಮುರಿ ಮಾರಾಟ ಶುರು ಮಾಡಿದೆ. ಸಣ್ಣ ಆದಾಯ ಹೊಟ್ಟೆ ತುಂಬ್ತಾ ಇತ್ತು. ಮನೆ ಈಗಲೂ ಬದುಕ್ತಾ ಇತ್ತು. ಈಗ ಮನೆಯವರ ಜೊತೆ ಸಂಭ್ರಮದ ನಗು ಬದುಕಿನ ಸಾರ್ಥಕತೆ. ಜೊತೆಗೆ ಬದುಕನ್ನು ತುಂಬಾ ಸುಲಭವಾಗಿ ಬದುಕೇ ಅರ್ಥ ಮಾಡಿಸಿದೆ.

- ಧೀರಜ್ ಬೆಳ್ಳಾರೆ                                  

ಚಿತ್ರ ಕೃಪೆ: ಇಂಟರ್ನೆಟ್ ತಾಣ