ಅವಳ ಆಸೆಯ ಪಟ್ಟಿ ತುಂಬಾ ದೊಡ್ಡದಿತ್ತು, ಗೆಳೆಯರ ಜೊತೆ ತಿರುಗಾಡಬೇಕಾದ ಎಲ್ಲ ಸ್ಥಳಗಳನ್ನು ಗುರುತಿಸಿ ಇಟ್ಟುಕೊಂಡಿದ್ದಳು. ಬೇರೆಯವರ ಹುಟ್ಟು ಹಬ್ಬವನ್ನು ತುಂಬಾ ಸಂಭ್ರಮದಿಂದ ವಿನೂತನವಾಗಿ ಆಚರಿಸುತ್ತಿದ್ದಳು. ಗೆಳೆಯರ ಜೊತೆ ಬಿಟ್ಟರೆ ಹೆಚ್ಚಿನವರ ಜೊತೆ ಮೌನವನ್ನೇ ಆಭರಣವಾಗಿ ಧರಿಸಿಕೊಂಡಿದ್ದಳು. ಗೆಳೆಯರು ಸಿಕ್ಕಿದ್ರೆ ಮಾತು ನಿಲ್ತಾನೆ ಇರಲಿಲ್ಲ. ಹೀಗಿದ್ದ ಬದುಕಿನ ಗಾಡಿ ಒಂದೇ ಕ್ಷಣ ನಿಂತುಬಿಟ್ಟಿದೆ. ಅವಳ ಕನಸು ಆಸೆಗಳನ್ನು ಆಗಾಗ ಫೋನಿನ ಮೂಲಕ ಕೇಳುತ್ತಿದ್ದ ಕಿವಿಗಳಿಗೆ ಈಗ ಅವಳ ಮೌನ ಒಂದೇ ಉತ್ತರವಾಗಿದೆ. ನಿನ್ನೆಯವರೆಗೂ ನಡೆದಾಡುತ್ತಿದ್ದವಳು ಎಂದು ಉಸಿರು ನಿಲ್ಲಿಸಿ ಎಲ್ಲರನ್ನ ಬಿಟ್ಟು ಹೊರಟಿದ್ದಾಳೆ. ಭಗವಂತನಿಗೆ ಆತನ ಹುಟ್ಟುಹಬ್ಬ ಆಚರಿಸುವುದಕ್ಕೆ ಜೊತೆಗ್ಯಾರೋ ಬೇಕಿತ್ತು. ಕಾರಣವಿಲ್ಲದೆ ಕಾಣೆಯಾಗಿದ್ದಾಳೆ. ನಗುವಿನ ಮುಖ ಇನ್ನು ಭಾವಚಿತ್ರದಲ್ಲಷ್ಟೇ ನೋಡಬೇಕೆನಿಸುತ್ತದೆ. ಅವಳೊಂದಿಗೆ ಕಳೆದ ಕ್ಷಣಗಳಷ್ಟೇ ಈಗ ಬದುಕಿ ಉಳಿದಿದೆ. ಭಗವಂತನ ಮೇಲೆ ಬೇಸರವಿದೆ ಬದುಕನ್ನು ಬದುಕಬೇಕು ಅಂತ ಅಂದುಕೊಂಡವರೇನಾ ಕಿತ್ತುಕೊಂಡಂತೆ. ತಪ್ಪಿಲ್ಲದ ಬದುಕಲ್ಲಿ ಕಣ್ಣೀರೇ ಜೊತೆಯಾಗಿದೆ. ನಗುವೊಂದೇ ಭಾವಚಿತ್ರದಲ್ಲಿ ಇನ್ನು ಜೀವನಪೂರ್ತಿ. ಆ ಜೀವ ಜೊತೆಗಿರೋದಿಲ್ಲ ಅನ್ನೋದೇ ಬೇಸರ ಭಗವಂತ ನಿನ್ನ ಮೇಲೆ ಕೋಪವಿದೆ ಹೀಗೆ ಅಂದುಕೊಂಡ  ಗೆಳತಿಯರು ಆಕೆಯನ್ನು ಕಳೆದುಕೊಂಡ ನೋವಿನಲ್ಲಿ ಮೌನವಾಗಿ ಬಿಟ್ಟರು ನಗುವೇ ತುಂಬಿದ ಅವರ ಮಾತಿನಲ್ಲಿ ಕಣ್ಣೀರೊಂದೇ ಕಾಣುತ್ತಿದೆ.

- ಧೀರಜ್ ಬೆಳ್ಳಾರೆ                                  

ಚಿತ್ರ ಕೃಪೆ: ಇಂಟರ್ನೆಟ್ ತಾಣ