ಬದುಕಿಗೊಂದು ಜವಾಬ್ದಾರಿ ಇದೆ, ಆ ಬದುಕನ್ನ ಬದುಕುವವರಿಗೂ ಕೂಡ. ನಾವೇನು ಮಾಡಬೇಕಾಗಿಲ್ಲ ನಾವು ನಮ್ಮ ಬದುಕನ್ನು ಎಷ್ಟು ಎತ್ತರಕ್ಕೆ ತೆಗೆದುಕೊಂಡು ಹೋಗಬೇಕು ಅಂತ ಅಂದ್ರೆ ನಿನ್ನ ಜೊತೆಗಿದ್ದವರಿಗೆ ನೀನು ಅದೃಷ್ಟ ಅಂತನ್ನಿಸಬೇಕು ಕಳೆದುಕೊಂಡವರು ಛೇ ಇವನು ಜೊತೆಗಿರಬೇಕಿತ್ತು ಅಂತ ಪಶ್ಚಾತಾಪ ಪಡಬೇಕು. ಹಾಗಾದಾಗ ನಿನ್ನ ಬದುಕು ಅದ್ಭುತವಾಗಿದೆ ಮತ್ತು ಸರಿಯಾಗಿದೆ ಅಂತ ಅರ್ಥ. ಇಷ್ಟು ಮಾಡಿ ನೋಡು ಹೀಗಂತ ಮೋಟಿವೇಶನ್ ಕೊಡ್ತಾ ಇದ್ದ ಗೆಳೆಯ. ಆದರೆ ನನ್ನ ಬದುಕಿನ ಓಡಾಟದ ನಡುವೆ ಬದುಕಿದ್ರೆ ಸಾಕು ಅಂತ ಅನ್ನಿಸೋದಿಕ್ಕೆ ಆರಂಭವಾಗಿದೆ. ಯಾರಿಗೆ ಅದೃಷ್ಟವೋ ಯಾರಿಗೆ ಪಶ್ಚಾತಾಪವೋ ಇದಕ್ಕಿಂತ ನನ್ನೊಳಗಿನ ಮನಸ್ಸಿಗೆ ನೆಮ್ಮದಿ ಸಿಕ್ಕರೆ ಸಾಕಾಗಿದೆ. ನನ್ನ ಅಕ್ಕ ಪಕ್ಕ ನಿಂತಿರುವರು ನಗ್ತಾ ಇರಲಿ, ಸಾಧ್ಯವಾದಷ್ಟು ಒಳ್ಳೆಯ ಕೆಲಸಗಳಾಗಲಿ ಸಾಲ ಮೋಸ ನೋವು ವ್ಯಥೆ ಎಲ್ಲವೂ ಆಗಾಗ ಬಂದು ಭೇಟಿಯಾಗುವ ಮೈಲಿಗಲ್ಲುಗಳಂತೆ. ತಲುಪುವ ದೂರವನ್ನ ಖಂಡಿತ ತಲುಪುತ್ತೇವೆ. ಸಾಗೋದಷ್ಟೇ ಬದುಕಿನ ಪಾಠ. ಈ ಎರಡು ವಾದದಲ್ಲಿ ನೀವು ಯಾವುದನ್ನು ಒಪ್ಕೋತೀರಿ, ಪ್ರಶ್ನೆ ನನ್ನ ಮುಂದೆ ಇಟ್ಟಿದ್ದ ಉತ್ತರಿಸುವ ಜವಾಬ್ದಾರಿ ನನ್ನದಾಗಿತ್ತು.

- ಧೀರಜ್ ಬೆಳ್ಳಾರೆ                                  

ಚಿತ್ರ ಕೃಪೆ: ಇಂಟರ್ನೆಟ್ ತಾಣ