ದಿನ ಪತ್ರಿಕೆಯಲ್ಲಿ ಸುದ್ದಿಯು ಪ್ರಕಟವಾಗಿದ್ದರೂ ಅವರ ಮನೆಯವರು ಈ ಸಾಧನೆಯನ್ನ ಕೊಂಡಾಡಲು ಜೊತೆ ಕಾಯ್ತಾ ಇದ್ರು, ವಿದೇಶದಲ್ಲಿ ಹೋಗಿ ಈ ದೇಶದ ಹೆಸರನ್ನು ಮೇಲೆತ್ತಿ ಹಿಡಿಯೋದು ಅಷ್ಟು ಸುಲಭದ ಕೆಲಸವಲ್ಲ ಅವರಿಬ್ಬರೂ ರಾತ್ರಿ ಹಗಲು ಪರಿಶ್ರಮಪಟ್ಟು ಕ್ರೀಡಾ ಕ್ಷೇತ್ರದಲ್ಲಿ ಮಿಂಚಲು ಆರಂಭಿಸಿದರು ಆದರೆ ಅದಕ್ಕೆ ತಕ್ಕದಾದ ಬೆಲೆ ಅವರಿಗೆ ಸಿಗಲೇ ಇಲ್ಲ. ವಿದೇಶದಲ್ಲಿ ಭಾರತದ ಬಾವುಟವನ್ನು ಎತ್ತರಕ್ಕೆ ಏರಿಸಿದವರು ಈ ನೆಲಕ್ಕೆ ಕಾಲಿಟ್ರೊಡನೆ ಅವರನ್ನು ಸ್ವಾಗತಿಸುವುದಕ್ಕಾಗಿಲೊ ಅಭಿನಂದಿಸುವುದಕ್ಕಾಗಿ ಯಾರು ಎದುರು ನಿಲ್ಲಲೇ ಇಲ್ಲ. ಯಾಕೆಂದರೆ ಯಾರ ಜೇಬು ತುಂಬುವುದಿಲ್ಲ. ಅವರು ತಮ್ಮ ಮನೆಗೆ ಬಾಡಿಗೆ ಗಾಡಿಯಲ್ಲಿ ತೆರಳುವಂತಾಯ್ತು, ಕೆಲವೊಂದು ಕ್ರೀಡೆಯಲ್ಲಿ ವಿಜಯಶಾಲಿ ಆದರೆ ಎಲ್ಲಾ ಕಡೆಗೂ ಅವರದೇ ಸುದ್ದಿ ಇವರಿಗೆ ಕನಿಷ್ಠ ಗೌರವವೂ ಸಿಗಲೇ ಇಲ್ಲ. ಇದೀಗ ಮೈದಾನಕ್ಕೆ ಬರೋದ್ದಕ್ಕೆ ಆಸಕ್ತಿ ಇರದಂತಾಗಿದೆ.
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!