ಭಗವಂತ ತಯಾರಾಗಿದ್ದಾನೆ. ನಿನಗೆ ವರವ ಕೊಡುವುದಕ್ಕೆ ನಿನ್ನನ್ನು ಇನ್ನೂ ಎತ್ತರಕ್ಕೆ ಏರಿಸುವುದಕ್ಕೆ. ನಿನ್ನಿಂದ ಹೊಸ ಹೊಸ ಕೆಲಸವನ್ನು ಮಾಡಿಸುವುದಕ್ಕೆ ಎಲ್ಲ ಸಾಧ್ಯತೆಗಳು ನಿನ್ನಿಂದ ಸಾಧ್ಯವಾಗಿಸುವುದಕ್ಕೆ ಆತ ಕಾದು ಕುಳಿತಿದ್ದಾನೆ. ಆದರೆ ಅದರಲ್ಲೊಂದು ಷರತ್ತು ಇದೆ ನೀನು ಒಂದಷ್ಟು ಹೆಜ್ಜೆಗಳನ್ನಾದರೂ ಇಡಬೇಕು ಭಗವಂತನ ಆಸೆ ಇಷ್ಟೆ ಎಲ್ಲವೂ ತುಂಬಾ ಸುಲಭವಾಗಿ ಸಿಕ್ಕಿ ಬಿಟ್ಟರೆ ಪ್ರಯತ್ನಕ್ಕೆ ಅರ್ಥನೇ ಇರೋದಿಲ್ಲ. ಹಾಗಾಗಿ ನಿನ್ನ ಪರಿಶ್ರಮದ ಒಂದೆರಡು ಹೆಜ್ಜೆಗಳಿಗೆ ಆತ ಕಾಯುತ್ತಿದ್ದಾನೆ ಸುಮ್ಮನೆ ಕುಳಿತಲ್ಲಿಗೆ ಏನೋ ಬಂದು ದೊರಕುವುದಿಲ್ಲ ಹೆಜ್ಜೆಗಳನ್ನು ಇಡು ಭಗವಂತ ಕೈ ಹಿಡಿದು ಮುಂದೆ ನಡೆಸುತ್ತಾನೆ. ನಿನ್ನನ್ನ ಕುಳಿತಲ್ಲಿಂದ ಏಳಿಸುವುದು ಭಗವಂತನ ಜವಾಬ್ದಾರಿ ಅಂತ ಅಂದುಕೊಳ್ಳುವುದು ತಪ್ಪು. ಹಾಗಾಗಿ ಆತ ಕಾಯ್ತಾ ಇದ್ದಾನೆ ಇನ್ನಾದರೂ ಎದ್ದೇಳು. ಈ ರೀತಿಯ ಪ್ರೇರಣೆಯ ಮಾತುಗಳು ಏನಾದರೂ ಹೊಸತನ ಮಾಡಿಸುವುದಕ್ಕೆ ಆಗಾಗ ಕೇಳಿಸಬೇಕೆಂದು ರಾಜೇಶ ಕಾಯುತ್ತಿದ್ದಾನೆ.

- ಧೀರಜ್ ಬೆಳ್ಳಾರೆ                                  

ಚಿತ್ರ ಕೃಪೆ: ಇಂಟರ್ನೆಟ್ ತಾಣ