ಸರಕಾರದಿಂದ ಹೊಸ ಘೋಷಣೆಯೊಂದು ಜಾರಿಯಾಯಿತು. ನಮ್ಮ ಪರಿಸರವನ್ನು ಉಳಿಸುವ ನಿಟ್ಟಿನಲ್ಲಿ ರಸ್ತೆಯಲ್ಲಿ ಅಲ್ಲಲ್ಲಿ ಬ್ಯಾನ‌ರ್ ಗಳನ್ನ ನೇತು ಹಾಕುವ ಹಾಗಿಲ್ಲ ಸಂಘ ಸಂಸ್ಥೆ ವ್ಯಕ್ತಿಗಳ ಬಗ್ಗೆ ಚಿತ್ರಿಸಿ ಹಾಕುವ ಹಾಗಿಲ್ಲ, ಇದರಿಂದ ನಗರ ಸೌಂದರ್ಯ ಕೆಡುತ್ತದೆ ಮತ್ತೆ ಪರಿಸರ ಹಾಳಾಗುತ್ತದೆ, ಜೊತೆಗೆ ಪಾದಾಚಾರಿಗಳಿಗೆ ತೊಂದರೆ ಉಂಟಾಗುತ್ತದೆ. ಇದಾದ ಕೆಲವೇ ವಾರಗಳಲ್ಲಿ ರಾಜಕೀಯ ನಾಯಕರು ಕೆಲವೊಂದು ಊರುಗಳಿಗೆ ಭೇಟಿ ನೀಡುವ ಕಾರ್ಯಕ್ರಮ ನಿಗದಿಯಾಗಿತ್ತು. ಅವರ ಸರಕಾರಕ್ಕೆ ನೂರು ದಿನ ತುಂಬಿದ ಸಂತೋಷವೂ ಬೆನ್ನಿಗೆ ಇತ್ತು. ಈ ಸುದ್ದಿಯನ್ನು ಜನರಿಗೆ ತಲುಪಿಸುವುದಕ್ಕೆ ಇಡೀ ಊರಿನಲ್ಲಿ ಕಟೌಟು ಬ್ಯಾನರುಗಳದ್ದೇ ರಾಜ್ಯಭಾರ ಇದನ್ನ ಪ್ರಶ್ನಿಸಿದರೆ ಕೆಲಸ ಕಳೆದುಕೊಳ್ಳಬೇಕು ತಲೆತಗ್ಗಿಸಿ ಮುಂದುವರೆಯಬೇಕು. ಇದರಿಂದ ಪರಿಸರವು ಹಾನಿ ಆಗುವುದಿಲ್ಲ ನಗರದ ಸೌಂದರ್ಯವೂ ಕೆಡೋದಿಲ್ಲ ಯಾಕೆಂದರೆ ಇದು ಸರಕಾರದ ಕೆಲಸ ಅಲ್ವಾ? ನಿಯಮ ಸರಕಾರದವರಿಗೆ ಅನ್ವಯ ಆಗೋದಿಲ್ಲ.

- ಧೀರಜ್ ಬೆಳ್ಳಾರೆ                                  

ಚಿತ್ರ ಕೃಪೆ: ಇಂಟರ್ನೆಟ್ ತಾಣ