ಏಕಾಂಗಿಯಾಗಿ ಬದುಕುತ್ತೇನೆ ಯಾರ ಅವಶ್ಯಕತೆಯೂ ನನಗಿಲ್ಲ ನೋವಿನಲ್ಲಿ ನೆನಪಿನಲ್ಲಿ ಯಾರೂ ಜೊತೆಗಾರರಲ್ಲ ನಮ್ಮ ಬದುಕನ್ನ ನಾವೇ ಕಟ್ಟಿಕೊಳ್ಳಬೇಕು ನಮ್ಮ ಹೆಸರನ್ನು ತಾವೇ ಸಾಧಿಸಿಕೊಂಡು ಮುಂದುವರೆಯಬೇಕು ಸಾಧನೆ ಆದರೂ ಸೋಲಾದರೂ ನಾವೇ ಜವಾಬ್ದಾರಿ ಅದಕ್ಕೆ ನಾವೇ ಹೊಣೆ ಹಾಗಾಗಿ ನಾನೊಬ್ಬನೇ ಬದುಕುತ್ತೇನೆ ನನಗೆ ಯಾರೂ ಬೇಕಿಲ್ಲ. ನನ್ನ ಜೊತೆಗೆ ಇರೋರು ನನಗೆ ಅವಶ್ಯಕತೆ ಇಲ್ಲ ಹೀಗೆ ಯಾರೋ ಹೇಳಿದವರ ಮಾತನ್ನು ಕೇಳಿಕೊಂಡು ಬಂದು ಏಕಾಂಗಿಯಾಗಿ ಬದುಕುತ್ತೇನೆ ಅಂತ ಬಾಡಿಗೆ ಮನೆಯಲ್ಲಿ ಬದುಕು ಕಟ್ಟಿಕೊಳ್ಳುವುದಕ್ಕೆ ಶುರು ಮಾಡಿದ ರಮೇಶ್ ಎರಡು ದಿನ ಕಳೆಯುವುದರೊಳಗೆ ಊಟ ಮಾಡುವಾಗ ಅಮ್ಮ ನೆನಪಾದರು ಮನೆಯಲ್ಲಿ ಭಯವಾದಾಗ ಅಪ್ಪ ನೆನೆಪಾದರೂ ಸಂಜೆ ಹೊತ್ತಲ್ಲಿ ಮಾತನಾಡೋದಕ್ಕೆ ಯಾರು ಇಲ್ಲೆ ಇದ್ದಾಗ ಅಕ್ಕ ತಮ್ಮ ನೆನಪಾದರು, ಕೆಲಸ ಮುಗಿಸಿ ಬರುವಾಗ ಗೆಳೆಯರು ನೆನಪಾದರೂ. ಎಲ್ಲರೂ ಬೇಕಿತ್ತು ಅಂತ ಅನ್ನಿಸಿ ಬಾಡಿಗೆ ಮನೆ ತೊರೆದು ಮನೆಗೆ ತಲುಪಿಬಿಟ್ಟ. ಏಕಾಂತ ಅನ್ನೋದು ನೋವಿನಲ್ಲಿದ್ದಾಗ ಆದಾಗ ಅನ್ನಿಸುವ ಪದ. ಆದ್ರೆ ಬದುಕಿನಲ್ಲಿ ಎಲ್ಲರೂ ಜೊತೆಗಿದ್ದಾಗ ಮಾತ್ರ ಬದುಕಿಗೂ ಅರ್ಥ ಅನ್ನೋದು ಅವನಿಗೆ ಅರ್ಥವಾಯಿತು.
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!