ದೊಡ್ಡದೊಂದು ಸಭೆ ಏರ್ಪಾಟು ಆಗಿತ್ತು. ಸರಕಾರದ ಸಾಧನೆಗಳನ್ನು ಗುರುತಿಸಿ ಅಲ್ಲಿ ಎಲ್ಲರನ್ನೂ ಗೌರವಿಸುವವರಿದ್ದರು. ಯಾವ ಊರಿನಲ್ಲೂ ಮಾಡದ ಸಾಧನೆ ಇದಾಗಿದೆ ಇಂತಹ ಸರಕಾರಗಳು ಹೀಗೆ ಮುಂದುವರೆಯಬೇಕು ಅನ್ನೋದನ್ನ ಆ ವೇದಿಕೆಯಲ್ಲಿ ಮಾತನಾಡುವವರಿದ್ದರು. ಇದನ್ನು ಚಿತ್ರೀಕರಿಸಿ ಟಿವಿ ಮೊಬೈಲು ಪೇಪರ್ ಗಳಲ್ಲಿ ಎಲ್ಲಾ ಕಡೆಯೂ ಜನರ ಬಳಿಗೆ ಸುದ್ದಿ ತಲುಪೋ ಹಾಗೆ ಮಾಡುವುದಕ್ಕೆ ವ್ಯವಸ್ಥೆಯು ಆಗಿತ್ತು. ಈ ಕಾರ್ಯಕ್ರಮ ಮುಗಿಸಿ ಎಲ್ಲರೂ ಅವರವರ ಮನೆಗೆ ಹೊರಟರು ಈ ಕಾರ್ಯಕ್ರಮ ನಡೆಯುತ್ತಿರುವಾಗಲೇ ಒಂದು ತಿಂಗಳ ಹಿಂದೆ ನಿರ್ಮಾಣವಾಗಿದ್ದ ಸೇತುವೆ ಮುರಿದು ಬಿದ್ದ ಸುದ್ದಿ ಬಿತ್ತು, ಶಾಲೆಯಲ್ಲಿ ಆಸನವಿಲ್ಲದೆ ಮಕ್ಕಳು ನೆಲದಲ್ಲಿ ಕುಳಿತ ಉದಾಹರಣೆ ಕಂಡುಬಂದಿತ್ತು. ಮೇಲ್ಟಾವಣಿ ಕುಸಿದು ಬಿದ್ದು ಒಂದಷ್ಟು ಮಕ್ಕಳಿಗೆ ತೊಂದರೆಯಾದ ಸುದ್ದಿಯೂ ಬಂತು. ಒಳಚರಂಡಿ ವ್ಯವಸ್ಥೆ ಇಲ್ಲದೆ ನೀರು ರಸ್ತೆಯಲ್ಲಿ ಮನೆ ಒಳಗೆ ನುಗ್ಗಿದ ಕಥೆಯು ಕೇಳಿತು, ಆದರೆ ಇದ್ಯಾವುದೋ ಮರುದಿನದ ಪತ್ರಿಕೆಯಲ್ಲಿ ಸುದ್ದಿ ಆಗಲೇ ಇಲ್ಲ.
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!