ಬದುಕು ಎಲ್ಲಿಂದ ಎಲ್ಲಿಂದ ಎಲ್ಲಿಗೆ ಬೇಕಾದರೂ ಕೊಂಡೊಯ್ಯಬಹುದು. ಇದನ್ನ ಶಾಲೆಯಲ್ಲಿ ಮೇಷ್ಟ್ರು ಆಗಾಗ ಹೇಳ್ತಾ ಇದ್ರು ಆದರೆ ನಾನು ಅದನ್ನು ಒಪ್ಪಿಕೊಂಡಿರಲಿಲ್ಲ. ಈಗ ಬದುಕು ಅದನ್ನ ತಿಳಿಸಿದ ಮೇಲೆ ಒಪ್ಪಿಕೊಳ್ಳುವುದಕ್ಕೆ ಶುರು ಮಾಡಿದ್ದೇನೆ ವಿದೇಶದಲ್ಲಿ ಕೆಲಸ ಮಾಡ್ತಾ ಇದ್ದವರು, ಸಣ್ಣ ಅಂಗಡಿಯವೊಂದರಲ್ಲಿ ಅಡುಗೆ ತಯಾರಿ ಮಾಡ್ತಾ ಇದ್ದಾರೆ, ತನ್ನದೇ ಸ್ವಂತ ಕಂಪನಿ ನಡೆಸುತ್ತಿದ್ದವರು ಕೆಲಸಕ್ಕಾಗಿ ಒಂದಷ್ಟು ಜನರ ಮುಂದೆ ಬೇಡಿಕೊಳ್ಳುತ್ತಿದ್ದಾರೆ, ಬೀಗಗಳ ತಯಾರಿಸುತ್ತಿದ್ದ ಯಜಮಾನ ಯಾರದೋ ಗಾಡಿ ಓಡಿಸುತ್ತಾ ಅವರೇ ಕೆಲಸ ನಿರ್ವಹಿಸುತ್ತಿದ್ದಾರೆ. ಎಟಿಎಮ್ ಕಾಯ್ತಾ ಇದ್ದ ವಾಚ್ ಮ್ಯಾನ್ ಊರಿನ ಪೊಲೀಸರಾಗಿದ್ದಾರೆ. ದುಡಿಯುವುದೇ ಖರ್ಚು ಮಾಡೋದಕ್ಕೆ ಅಂದುಕೊಂಡವರು ಒಂದೊಂದು ರುಪಾಯಿ ಶೇಖರಿಸಿ ಇಡುತ್ತಿದ್ದಾರೆ. ಬದುಕು ಒಬ್ಬೊಬ್ಬರನ್ನ ಒಂದೊಂದು ಕಡೆಗೆ ಕೊಂಡೊಯ್ಯುತ್ತದೆ. ಬದುಕಿನ ಹೊಸ ದಾರಿಯನ್ನು ಹುಡುಕಿಕೊಳ್ಳುವ ಪ್ರಯತ್ನ ಪಡಬೇಕು ಮುಂದಿನ ನಿರ್ಧಾರ ಭಗವಂತನಿಗೆ ಬಿಟ್ಟದ್ದು ಅನ್ನೋದು ಕಣ್ಣಮುಂದೆ ಅರ್ಥ ಆಗಿ ಹೋಯಿತು.
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!