ಎಲ್ಲರೂ ಅವರವರ ಬದುಕು ಸಾಗಿಸುವುದಕ್ಕೆ ಅಲ್ಲಿ ಸೇರಿದ್ದಾರೆ. ಕೆಲವರು ತಮ್ಮ ಹೊಟ್ಟೆ ಹೊರೆಯುವುದಕ್ಕೆ ಮಾರಾಟ ಮಾಡಬೇಕು, ಬಂದವರೆಲ್ಲರನ್ನ ತಮ್ಮ ಬಳಿಗೆ ಕರೆದು ತಮ್ಮಲ್ಲಿರುವದನ್ನ ಅವರಿಗೆ ಕೊಟ್ಟು ಅವರನ್ನು ಸಂತೃಪ್ತಿಪಡಿಸಿ ಹೊಟ್ಟೆ ತುಂಬಿಸಿಕೊಳ್ಳಬೇಕು. ಹಾಗೆಯೇ ಅಲ್ಲಿ ನೋಡುವುದಕ್ಕೆ ಖರೀದಿಸುವುದಕ್ಕೆ ತಿನ್ನುವುದಕ್ಕೆ ಬಂದವರು ಅವರ ದಿನವನ್ನು ದೂಡುವುದಕ್ಕೆ ಒಂದು ಕಾರಣವನ್ನು ಹುಡುಕಿಕೊಂಡವರು ಕಿಸೆಯಲ್ಲಿರುವ ಸಣ್ಣ ಮೊತ್ತದಲ್ಲಿ ಆದಷ್ಟು ಹೆಚ್ಚು ಸಂಭ್ರಮವನ್ನು ಪಡಬೇಕು. ಇಬ್ಬರ ಬದುಕು ಒಂದೇ ತಕ್ಕಡಿಯಲ್ಲಿದೆ. ಸಣ್ಣ ಮೊತ್ತದಲ್ಲಿ ಹೆಚ್ಚು ಖುಷಿಯನ್ನು ಅನುಭವಿಸಲು ಕಾಯುವವರು ಒಂದು ಕಡೆಯಾದರೆ, ಇದ್ದದ್ದನ್ನ ಹೆಚ್ಚು ಜನರಿಗೆ ಮಾರಾಟ ಮಾಡಿ ಆ ದಿನದ ಹೊಟ್ಟೆ ತುಂಬಿಸಿಕೊಳ್ಳುವ ಜವಾಬ್ದಾರಿ ಇನ್ನೊಬ್ಬರು. ಒಟ್ಟಿನಲ್ಲಿ ಉತ್ಸವಗಳು ಹಬ್ಬಗಳು ಜಾತ್ರೆಗಳೆಲ್ಲವೂ ಹೆಸರಿಗೆ ಅದ್ಭುತ ಅನಿಸಿದ್ರು ಅಲ್ಲಿ ಬದುಕು ಕಟ್ಟಿಕೊಳ್ಳುವವರು ಪುಟ್ಟ ಸಂಸಾರದ ಮುಗ್ಧ ಮನಸ್ಸುಗಳು. ಕಿಸೆ ಖಾಲಿಯಾಗಿ ಹೊಟ್ಟೆ ತುಂಬಿಸಿಕೊಳ್ಳೋಕ್ಕಾಗದೆ ಕಣ್ಣು ತುಂಬಿಸಿಕೊಳ್ಳುವವರು ಒಂದಷ್ಟು ಜನ ಸಿಕ್ತಾರೆ, ಇರುವ ಸಣ್ಣ ಮೊತ್ತದಲ್ಲಿ ಯಾವುದನ್ನು ಆಯ್ಕೆ ಮಾಡಿಕೊಳ್ಳಲಿ ಎನ್ನುವ ಯೋಚನೆಯಲ್ಲೂ ಕಾಲ ಕಳಿಯುವರು ಇದ್ದಾರೆ. ಒಟ್ಟಿನಲ್ಲಿ ಸಂತೃಪ್ತಿಯೋ ಸಂಭ್ರಮವೋ ನೋವು ನಿರಾಸೆ ಏನೋ ಒಂದು ಕಾರ್ಯಕ್ರಮದ ನಡುವಿನಿಂದ ಹಾದು ಹೋಗಿ ಬಂದಾಗ ಯಾವುದಾದರೂ ಒಂದು ಭಾವ ಮನಸ್ಸಿನೊಳಗೆ ಉಳಿಯುವುದಂತೂ ಖಂಡಿತ. ಹಾಗಾಗಿ ಒಂದು ಸಲ ಹಾಗೆ ಸಂತೆ ಜಾತ್ರೆಗಳ ನಡುವೆ ನುಗ್ಗಿ ಬಾ ಬದುಕು ಇನ್ನೂ ಚೆನ್ನಾಗಿ ಅರ್ಥ ಆಗುತ್ತೆ.
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!