ನನ್ನದೊಂದು ದೂರನ್ನ ದಾಖಲಿಸಿಕೊಳ್ಳಬೇಕೆಂದು ವಿನಂತಿ. ಅಂತರ್ಮುಖಿಯಾಗಿರುವ ಸಮುದ್ರ ಬಳಿ ಕುಳಿತು ಆಗಾಗ ದಡಕಪ್ಪಳಿಸುವ ಅಲೆಗಳನ್ನ ತನ್ನ ಭೂಗರ್ಭದೊಳಗೆ ಮತ್ತೆಳೆದುಕೊಳ್ಳುತ್ತಾ ಒಂದು ಅಲೆಯನ್ನು ಕೂಡ ತೀರದಲ್ಲಿ ಬಿಡದೆ ಎಲ್ಲವನ್ನು ಒಡಲಿಗೊಯ್ಯುವ ಶರಧಿಯ ಮೇಲಿರುವ ಆಗಸವನ್ನ ಆಗಾಗ ದೃಷ್ಟಿಸುತ್ತೇನೆ. ಮಳೆಗಾಲವಾದರೆ ಸುಮ್ಮನೆ ತೀರದಲ್ಲಿ ಕುಳಿತು ಮೋಡಗಳ ಒಂದೊಂದು ಚಿತ್ರವನ್ನ ಕಣ್ಣುಂಬಿಸಿಕೊಳ್ಳುತ್ತೇನೆ. ಇತ್ತೀಚಿಗೆ ಬಿದ್ದ ಮಳೆಯ ನಡುವೆ ಮೂಡಗಳು ಯಾವುದೋ ಒಂದು ಆಕಾರವನ್ನ ತಾಳಿ ನಿಲ್ಲುತ್ತಿಲ್ಲ. ಕ್ಷಣಕೊಂದು ರೂಪಗಳನ್ನು ಪಡೆದುಕೊಂಡು ಮನಸ್ಸಿನೊಳಗೆ ಕಲ್ಪನೆಗಳನ್ನು ಸೃಷ್ಟಿಸಿಕೊಳ್ಳಲಾಗದಷ್ಟು ಬೇಗ ಚದುರಿ ಬಿಡುತ್ತಿದೆ. ಭಗವಂತ ಭೂಮಿಗೆ ಮಳೆ ಕೊಡಬೇಕು ಆದರೆ ಮೋಡಗಳು ಒಂದಷ್ಟು ಹೊತ್ತು ರೂಪಗಳನ್ನು ಪಡೆದುಕೊಂಡದ್ದನ್ನ ನೋಡುವ ಕಣ್ಣುಗಳು ಆಸ್ವಾದಿಸಿದಷ್ಟು ವೇಗವಾಗಿ ಮೋಡಗಳನ್ನು ಚದಿರಿಸುವುದು ಯಾಕೆ? ಮಳೆಯಿಂದ ಸಂಭ್ರಮ ಸಿಗುವ ಹಾಗೆ ಮೋಡದಿಂದ ಸಂಭ್ರಮ ಸಿಗುತ್ತೆ ತಾನೇ? ಭಗವಂತನಿಗೆ ಇದನ್ನ ಅರ್ಥ ಮಾಡಿಸಬೇಕು. ಹಾಗಾಗಿ ಭಗವಂತನ ಮೇಲೆ ದೂರನ್ನು ದಾಖಲಿಸುತ್ತೇನೆ. ಅಲ್ಲ ಇದರಲ್ಲಿ ಗಾಳಿಯ ತಪ್ಪ ಇರಬಹುದೇನೋ, ಒಟ್ಟಿನಲ್ಲಿ ಭಗವಂತನೋ ಗಾಳಿಯೋ ಎಲ್ಲರೂ ಸೇರಿಕೊಂಡು ಒಂದು ನಿರ್ಧಾರಕ್ಕೆ ಬರಲಿ ಮೋಡಗಳನ್ನ ಕ್ಷಣ ಹೊತ್ತು ಆಕಾರಗಳನ್ನು ಪಡೆದುಕೊಂಡು ಆಗಸದಲ್ಲಿ ಮಿನುಗುವಂತೆ ಮಾಡ್ಲಿ ಮತ್ತೆ ಚದುರಿ ಮಳೆಯನ್ನ ತರ್ಲಿ ನನ್ನದೇನು ಅಭ್ಯಂತರವಿಲ್ಲ
.- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!