ಅವರು ಯಾರನ್ನೂ ದೂರುತ್ತಿಲ್ಲ ಜೋರು ಮಳೆಯಲ್ಲಿ ತಲೆಯ ಮೇಲೆ ಒಂದು ಸೂರಿಲ್ಲ. ಇಂದು ನಾಳೆ ನಾಡಿದ್ದು ಅಂತ ಧರಿಸುವುದಕ್ಕೆ ಬೇರೆ ಬೇರೆ ಬಟ್ಟೆಗಳಿಲ್ಲ ಅನ್ನ ಸಿಕ್ಕಿದೆ ಒಂದು ಪಾತ್ರೆ ಇದೆ ಅದನ್ನ ಬೇಯಿಸಿಕೊಳ್ಳಬೇಕಾಗಿದೆ ದಾರಿಯ ಬದಿಯಲ್ಲಿದ್ದ ಮೂರು ಕಲ್ಲುಗಳನ್ನು ಇಟ್ಟು ಬೆಂಕಿ ಹಚ್ಚಿದ್ದಾರೆ ಅಕ್ಕಿ ಕುಡಿಯುತ್ತಿರುವಾಗಲೇ ಜೋರು ಮಳೆ. ಮಳೆಯ ಮೇಲೂ ಕೋಪವನ್ನ ತೋರಿಸಿಕೊಳ್ಳುತ್ತಿಲ್ಲ ಹೇಗೋ ಬೆಂಕಿಯನ್ನುಳಿಸಿಕೊಂಡು ಅನ್ನ ಬೆಂದ ಮೇಲೆ ಉಪ್ಪು ಹಾಕಿ ಇಬ್ರು ಹೊಟ್ಟೆ ತುಂಬಾ ಊಟ ಮಾಡಿದ್ರು ಗಂಡ ಹೆಂಡತಿ ಒಟ್ಟಿಗೆ ಬದುಕನ್ನು ಸಾಗಿಸಬೇಕು ಅನ್ನೋದು ಅವರ ಯೋಚನೆ ತೆಲಸ ಹುಡುಕ್ತಾ ಹೊರಟರು ರಾತ್ರಿ ಅನ್ನಕ್ಕೆ ವ್ಯವಸ್ಥೆ ಆಗಬೇಕಲ್ವಾ ಕಣ್ಣ ಮುಂದೆ ಕಾಣುತ್ತಿರುವ ಬೇರೆಯವರ ಬದುಕನ್ನು ಕಂಡು ಹೊಟ್ಟೆ ಉರಿ ಇಲ್ಲ ತಮಗೇಕೆ ಈ ಬದುಕು ಸಿಕ್ಕಿಲ್ಲ ಅನ್ನುವ ಬೇಸರವೂ ಇಲ್ಲ ಒಪ್ಪಿಕೊಂಡಿದ್ದಾರೆ ಬದುಕನ್ನಪ್ಪಿಕೊಂಡಿದ್ದಾರೆ

- ಧೀರಜ್ ಬೆಳ್ಳಾರೆ                                  

ಚಿತ್ರ ಕೃಪೆ: ಇಂಟರ್ನೆಟ್ ತಾಣ