ಪೂಜಿಸಿ ಆರಾಧಿಸಿ ಗೌರವವನ್ನು ಕೊಡುತ್ತೀರಿ ನನ್ನ ದೇಹದ ಒಳಗೆ ಲಕ್ಷಾಂತರ ದೇವರು ನೆಲೆಸಿದ್ದಾರೆ ಅನ್ನೋದನ್ನ ತಿಳಿಸಿದ್ದೀರಿ. ಇಷ್ಟೆಲ್ಲ ಆಗಿರುವಾಗ ನಾನೇಕೆ ಬೀದಿ ಬೀದಿ ಅಲೆಯುತ್ತಿದ್ದೇನೆ ದಾರಿಯಲ್ಲಿ ಬಿದ್ದ ಪ್ಲಾಸ್ಟಿಕ್ ತ್ಯಾಜ್ಯಗಳನ್ನ ತಿಂದು ನನ್ನ ಜೀವವನ್ನು ಕಳೆದುಕೊಳ್ಳುತ್ತಿದ್ದೇನೆ. ಹೊಟ್ಟೆ ಹಸಿವಾಗುತ್ತಿದೆ. ನನ್ನೊಳಗೆ ದೇವರಿರೋದು ಸತ್ಯ ಹೌದಾದರೆ ನನಗೆ ಮೂರು ಹೊತ್ತು ತಿನ್ನೋದಕ್ಕೆ ನೀಡಿ. ಚಿತ್ರಗಳನ್ನು ಬಿಡಿಸೋದು ಭಾಷಣಗಳನ್ನು ಹೊಡಿಯೋದು ಬೇಡ ನನ್ನ ಬದುಕಿಗೊಂದು ನೆಲೆ ಕೊಟ್ಟು ನಾನು ಗೌರವಯುತವಾಗಿ ಬಾಳುವ ಹಾಗೆ ಮಾಡಿ ನಿಮ್ಮಲ್ಲಿ ಬೇಡಿಕೊಳ್ಳುತ್ತೇನೆ .ಈ ದಿನ ದಾರಿ ಬದಿಯ ದನ ಒಂದು ನೀಡಿದ ಬೇಡಿಕೆಯನ್ನು ಇಲ್ಲಿ ದಾಖಲಿಸಿದ್ದೇನೆ
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!