ಅವನ ಬದುಕಲ್ಲಿ ಇಲ್ಲದ ಸಮಸ್ಯೆಗಳಿಲ್ಲ, ಸಣ್ಣವನಿರುವಾಗಲೇ ಹೆತ್ತವರನ್ನ ಕಳೆದುಕೊಂಡ, ಹಾಗೆ ಬೆಳೆಯುತ್ತಾ ದೊಡ್ಡವನಾದಾಗ ತುಂಬಾ ಪ್ರೀತಿಸುವವರು ದೂರಾಗಿಬಿಟ್ರು ತುಂಬಾ ಶ್ರದ್ಧೆಯಿಂದ ಮಾಡುತ್ತಿದ್ದ ಕೆಲಸದಿಂದ ತೆಗೆದುಹಾಕಿಬಿಟ್ಟರು ಬರ್ತಾ ಇದ್ದಂತ ಸಂಬಳ ಒಂದಷ್ಟು ಸಾಲಗಳಿಗೆ ಖಾಲಿ ಆಗ್ತಾ ಇತ್ತು ಆತನಲ್ಲಿ ಪ್ರತಿಭೆ ಇದ್ದರು ಅದಕ್ಕೆ ಸೂಕ್ತ ಗೌರವ ಎಲ್ಲೂ ಸಿಗಲೇ ಇಲ್ಲ. ಪ್ರತಿ ಸಲ ಸೊಲು ನೋವುಗಳಾದರೂ ಆದ್ರೂ ಒಂದು ದಿನವೂ ಸಾಯುವ ಯೋಚನೆ ಮಾಡಲಿಲ್ಲ. ಮೊನ್ನೆ ಕೆಲಸದಲ್ಲಿ ಮ್ಯಾನೇಜರ್ ಬೈದ ಕಾರಣಕ್ಕೆ ತುಂಬಾ ನೋವಿನಿಂದ ನಾನು ಅವನ ಬಳಿ ಹೋಗಿ ಮಾತನಾಡಿದೆ ಅವನು ಹೇಳಿದ್ದು ಇಷ್ಟೇ,
" ನೋಡು ನಾಳೆ ಅನ್ನೋದು ಒಂದು ಇದ್ಯಲ್ಲ ಅದು ತುಂಬಾ ಅದ್ಭುತವಾಗಿರುತ್ತೆ ನಮ್ಮನ್ನ ಎತ್ತ ಕಡೆಗೂ ಕೊಂಡುಯುತ್ತೆ ಹಾಗಾಗಿ ಕಾಲ್ವೇಕು ನಾಳೆ ಬಂದು ನಮ್ಮ ಕೈ ಹಿಡಿತದೆ ಜೊತೆಗೆ ತುಂಬ ದೂರ ಹೆಜ್ಜೆಗಳನ್ನ ಅದ್ಭುತವಾಗಿ ಇಡಬಹುದು, ಅದೊಂದು ಸಿಹಿಯಾದ ನಂಬಿಕೆ ಹಾಗಾಗಿ ಕಾಯ್ತಾ ಇದ್ದೇನೆ ಅವನ ಮಾತುಗಳು ನನ್ನ ಬದುಕಿಗೂ ಧೈರ್ಯ ತುಂಬಿತು ನಾಳೆಗಾಗಿ ಕಾಯ್ತಾ ಇದ್ದೇನೆ.
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!