ದೇವರ ಬಳಿ ಕೈಮುಗಿದು ಕೇಳಿಕೊಳ್ಳುತ್ತಿದ್ದ. ದೇವರೇ ನನಗೆ ಯಾವತ್ತೂ ವಯಸ್ಸಾಗೋದು ಬೇಡ. ಈಗ ಹೇಗಿದ್ದೇನೋ ನನ್ನ ಮುಖದಲ್ಲಿ ಏನು ಸೌಂದರ್ಯ ಕಾಣ್ತಾ ಇದೆಯೋ ಅದು ಹಾಗೆ ಉಳಿದುಬಿಡಲಿ. ವಯಸ್ಸು ಹೆಚ್ಚಾಗಿ ಜೀವನದ ಎಲ್ಲ ಕಷ್ಟಗಳನ್ನ ತಲೆಯ ಮೇಲೆ ಹೊತ್ತು ಬದುಕುವುದಕ್ಕೆ ಸಾಧ್ಯವಾಗುವುದಿಲ್ಲ. ನನ್ನ ಮುಖದ ಸೌಂದರ್ಯವನ್ನು ಕಂಡು ನನ್ನ ಜೊತೆ ಸಂಭ್ರಮದಿಂದ ಬದುಕುತ್ತಿರುವವರು ಒಂದಷ್ಟು ಮಂದಿ ಇದ್ದಾರೆ .ಹಾಗೆ ಇದ್ದು ಬಿಡಲಿ ನನ್ನ ಸೌಂದರ್ಯ ಕೊನೆಯವರೆಗೂ ಉಳಿದು ಬಿಡಲಿ ಇದು ನಿನ್ನಲ್ಲಿ ಬೇಡಿಕೆ. ಭಗವಂತ ಪ್ರತ್ಯಕ್ಷನಾಗಿ ಉತ್ತರಿಸಿದ ನೀನು ನಿನ್ನ ಭಾವಚಿತ್ರದಲ್ಲಿರುವ ಹಾಗೆ ಒಂದು ದಿನ ವಯಸ್ಸಾಗದೆ ಬದುಕುವುದಕ್ಕೆ ಸಾಧ್ಯವಾಗುವುದಿಲ್ಲ ಮಗು. ನಿನ್ನ ನೈಜ ಚಿತ್ರಕ್ಕೆ ಭಾವವಿದೆ ಅಲ್ಲಿ ಬದಲಾವಣೆಗಳು ಏರ್ಪಡುತ್ತವೆ, ನೋವು ಸುಖ ಸಂಭ್ರಮ ಹತಾಶೆ ವೈರತ್ವ ವೈಮನಸು ಇವುಗಳೆಲ್ಲದರ ನಡುವೆ ನಿನ್ನ ದೇಹಕ್ಕೆ ವಯಸ್ಸು ಹೆಚ್ಚಾಗುತ್ತದೆ. ಅನುಭವ ದೊಡ್ಡದಾಗುತ್ತದೆ ಮುಖದ ಸೌಂದರ್ಯಕ್ಕಿಂತ ನಿನ್ನ ವ್ಯಕ್ತಿತ್ವವನ್ನು ಗುರುತಿಸಿ ನಿನ್ನ ಹತ್ತಿರ ಬರುವವರು ಹೆಚ್ಚಾಗುತ್ತಾರೆ ನಿನ್ನ ಮನಸ್ಸಿನ ಸೌಂದರ್ಯವನ್ನು ಉಳಿಸಿಕೋ. ಎಲ್ಲರಿಗೂ ನೀನು ಪ್ರೀಯವಾಗ್ತೀಯಾ. ಭಗವಂತನಿಗೆ ಕೈ ಮುಗಿದು ಸೌಂದರ್ಯವನ್ನು ಹೆಚ್ಚಿಸುವ ಕೆಲಸದಲ್ಲಿ ತೊಡಗಿದ.
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!