ನೀನು ನನ್ನನ್ನ ಅರ್ಥ ಮಾಡಿಕೊಂಡಿದ್ದೆ ಆ ಕಾರಣಕ್ಕೆ ನನ್ನ ಬದುಕಿನ ಹೋರಾಟವನ್ನು ನೀನು ನೋಡಿದ ಕಾರಣಕ್ಕೆ ನನಗೆ ಆಹಾರವನ್ನು ಒದಗಿಸಿದ್ದೀಯ ಅಂದುಕೊಂಡಿದ್ದೆ. ಆದರೆ ನಾನೀಗ ಉಸಿರು ನಿಲ್ಲಿಸುತ್ತಿದ್ದೇನೆ. ಬದುಕಿನ ಎಲ್ಲ ಕ್ಷಣಗಳು ಇಲ್ಲಿಗೆ ಕೊನೆಯಾಗುತ್ತಿದೆ. ಮನೆಯಲ್ಲಿ ನನ್ನ ನಂಬಿ ಕಾಯುತ್ತಿರುವ ನನ್ನವರೆಲ್ಲರನ್ನ ಉಪವಾಸದಿಂದ ಸಾಯುವಂತೆ ಮಾಡಿದ್ದೇನೆ, ನಾನು ನಿನ್ನನ್ನು ನಂಬಬಾರದಿತ್ತು. ನನಗೂ ಬದುಕುವ ಅವಕಾಶವಿದೆ. ನೀನು ತಿನ್ನುವ ಆಹಾರದಲ್ಲಿ ವಿಷವನ್ನಿಟ್ಟು ನನ್ನ ಬದುಕನ್ನ ಕೊನೆಗಾಣಿಸ್ತಿ ಅಂತ ಅಂದುಕೊಂಡಿರಲಿಲ್ಲ. ನೀನು ಮನುಷ್ಯನಾಗಿ ನಿನ್ನೊಳಗೆ ಆಲೋಚನೆ ಬುದ್ಧಿಗಳನ್ನೆಲ್ಲ ತುಂಬಿಕೊಂಡಿದ್ದರು ಕೂಡ ಬದುಕುವವರನ್ನು ಸಾಯಿಸುವ ಕೀಳು ಮಟ್ಟದ ಯೋಚನೆಯಾಕೆ? ನಮ್ಮ ಸಾವನ್ನ ಯಾರೂ ಪ್ರಶ್ನಿಸುವುದಿಲ್ಲ ನಮ್ಮನ್ನು ಸಾಯಿಸಿದರು ನಿಮಗೆ ಶಿಕ್ಷೆಯಾಗುವುದಿಲ್ಲ ಅನ್ನುವ ಅಹಂಕಾರದಿಂದಲೇ ಹೀಗೆ ಮಾಡ್ತಾ ಇರೋದು ತಾನೇ ನೀವು ನಿರ್ಮಿಸಿರುವ ನ್ಯಾಯಾಲಯದಲ್ಲಿ ನಮಗೆ ನ್ಯಾಯ ಸಿಗದೇ ಇದ್ದರೂ ಕೂಡ ನಿರಾಕಾರನ ನ್ಯಾಯಾಲಯದ ಮುಂದೆ ನೀನು ಶಿಕ್ಷೆ ಅನುಭವಿಸ್ತಿಯ. ನನಗೆ ಬೇಸರವಿಷ್ಟೇ ನನ್ನ ನಂಬಿಕೆಯನ್ನು ನೀನು ಉಳಿಸಿಕೊಂಡಿಲ್ಲ ಅನ್ನೋದು ... ಇಲಿಯೊಂದರ ಆತ್ಮಕಥೆಯ ಕೊನೆಯ ಸಾಲುಗಳು ಮನಸ್ಸಿಗೆ ತುಂಬಾ ಘಾಸಿಯನ್ನು ಉಂಟು ಮಾಡಿತು

- ಧೀರಜ್ ಬೆಳ್ಳಾರೆ                                  

ಚಿತ್ರ ಕೃಪೆ: ಇಂಟರ್ನೆಟ್ ತಾಣ