ಅಮ್ಮನನ್ನ ಹುಡುಕಿ ಕೊಡಿ. ಅಮ್ಮ ನೋಡೋಕೆ ತುಂಬಾ ಚಂದ ಇದ್ದಾರೆ, ಇವತ್ತು ಸೀರೆ ಉಟ್ಟಿದ್ದಾರೆ ಅವರು ನನ್ನನ್ನ ಬೆಳಿಗ್ಗೆ ಬೇಗ ಏಳಿಸುವುದಿಲ್ಲ, ಊಟ ಮಾಡಿಸ್ತಾರೆ. ಪ್ರತಿದಿನ ಆಟ ಆಡ್ತಾರೆ ನನ್ನ ಶಾಲೆ ಎಲ್ಲ ಕೆಲಸಕ್ಕೂ ಜೊತೆ ಕುಳಿತುಕೊಳ್ಳುತ್ತಾರೆ ಹೊಸ ಹೊಸ ಕೆಲಸಕ್ಕೆ ಪ್ರೇರೇಪಿಸುತ್ತಾರೆ ನಿನ್ನಿಂದ ಸಾಧ್ಯ ಇದೆ ಅಂತಾರೆ ತಪ್ಪು ಮಾಡಿದಾಗ ತುಂಬಾ ಜೋರಲ್ಲಿ ಬೈತಾರೆ ಹೀಗಿರೋದು ನನ್ನ ಅಮ್ಮ ಅವರನ್ನ ಹುಡುಕಿ ಕೊಡಿ ಈ ದೊಡ್ಡ ಜಾತ್ರೆಯಲ್ಲಿ ಅವರನ್ನ ಕಳೆದುಕೊಂಡಿದ್ದೇನೆ ಅವರ ಹೆಸರು ಗೊತ್ತಿಲ್ಲ ನಾನವರನ್ನು ಅಮ್ಮ ಅಂತ ಕರೀತೇನೆ ನಾನು ಅಮ್ಮ ಅಂತ ಕರೆದರೆ ಎಲ್ಲಿದ್ದರೂ ಖಂಡಿತ ಬರುತ್ತಾರೆ .ಹಾಗಾಗಿ ಆ ಮೈಕದಲ್ಲಿ ನಾನೇ ಒಂದ್ಸಲ ಅಮ್ಮ ಅಂತ ಕರೀತೇನೆ. ಮಗುವಿನ ಈ ಮಾತನ್ನು ಕೇಳಿ ಧ್ವನಿವರ್ಧಕದವರು ಹೆಸರಿಟ್ಟು ಕರೆಯೋದಕ್ಕೆ ಅವಕಾಶ ಮಾಡಿಕೊಟ್ಟರು. ಆ ಮಗು 10 ಸಲ ಕರೆದರೂ ಅಮ್ಮ ಬರಲಿಲ್ಲ ಆಗ ಒಬ್ರು ಅಜ್ಜ ಆ ಹುಡುಗನ ಹತ್ತಿರ ಬಂದು ಅಮ್ಮ ಸಿಕ್ಕಿದ್ದಾರೆ ಬಾ ಅಂತಂದು ಕರೆದುಕೊಂಡು ಹೋದರು .ಹೋಗುವಾಗ ಒಂದು ಮಾತು ಹೇಳಿದರು ನಾಲ್ಕು ವರ್ಷಗಳ ಹಿಂದೆ ಈ ಜಾತ್ರೆಲಿ ಅವರಮ್ಮ ಕಾಣೆಯಾಗಿಬಿಟ್ರು ಆನಂತರ ಸಿಗಲೇ ಇಲ್ಲ ಈಗಲೂ ಪ್ರತಿ ವರ್ಷ ಜಾತ್ರೆಯಲ್ಲಿ ಬಂದು ಅಮ್ಮನನ್ನು ಕರಿತಾನೆ, ಏನು ಮಾಡೋದು ದೇವರಿಗೂ ಅಥವಾ ಅಮ್ಮನಿಗೆ ಇವನ ಮಾತು ಕೇಳಿದರೆ ಸಾಕು.
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!