ಅವರಿಬ್ಬರ ಬದುಕಿನ ನಗುವನ್ನು ನೋಡಿ ಹಲವು ಜನ ಹೊಟ್ಟೆ ಉರಿದುಕೊಂಡಿದ್ದಾರೆ, ಏನಿವರ ಬದುಕಲ್ಲಿ ಕಷ್ಟಗಳೆ ಇಲ್ವಾ? ಒಂದು ದಿನವೂ ಜಗಳವಾಗಲ್ವಾ, ಇಷ್ಟು ಸಂಭ್ರಮದಲ್ಲಿ ಹೇಗೆ ಬದುಕುತ್ತಿದ್ದಾರೆ ಅಂತ ತಮ್ಮೊಳಗೆ ಪ್ರಶ್ನೆ ಮಾಡಿಕೊಳ್ಳುತ್ತಿದ್ದಾನೆ .ಅದೇ ಪ್ರಶ್ನೆಯನ್ನು ಅವರ ಬಳಿ ಕುಳಿತು ಕೇಳಿದಾಗ ಅವರು ಹೇಳಿದ್ದು ಇಷ್ಟೆ ನಿಮ್ಮೆಲ್ಲರಿಗೂ ನಮ್ಮ ನಗು ಮುಖ ಕಾಣುತ್ತೆ ಆದರೆ ನಮಗೂ ಜಗಳವಾಗುತ್ತೆ ಮಾತಿಗೆ ಮಾತು ಬೆಳೆಯುತ್ತೆ ಅಹಂಕಾರ ಹೆಚ್ಚಾಗುತ್ತೆ ಇದನ್ನು ಯಾವುದನ್ನು ಬೀದಿಗೆ ತಂದವರಲ್ಲ, ಆ ಬದುಕು ಮನೆಯೊಳಗಡೆ. ನಾವು ಒಳಗೆ ಮುರಿದುಕೊಂಡರು ಹೊರಗೆ ಜೋಡಿಸಿಕೊಂಡು ಬದುಕುವವರು ನಾನಂದುಕೊಂಡಂಗೆ ಇವಳಿಲ್ಲ ನಾನಂದುಕೊಂಡಂಗೆ ಇವನಿಲ್ಲ ಅನ್ನುವ ನೋವು ಇಬ್ಬರೊಳಗೂ ಇದ್ದರೂ ಒಂದಷ್ಟು ಬದಲಾವಣೆಗಳನ್ನು ತಂದು ಬದುಕನ್ನ ಚೈತನ್ಯವಾಗಿಸುವವರು ಎಲ್ಲರಂತೆ ಇದ್ದರೂ ಎಲ್ಲರಂತಿರದಂತವರು ಅದಕ್ಕೆ ಬದುಕಿಷ್ಟು ಸುಂದರ ಒಬ್ಬರನ್ನೊಬ್ಬರು ಅರ್ಥೈಸಿಕೊಂಡದ್ದಕ್ಕೆ .ಅವನ ಮಾತು ಬದುಕನ್ನು ನೋಡುವ ದಿಶೆಯನ್ನ ಬದಲಿಸಿ ಬಿಟ್ಟಿತು.

- ಧೀರಜ್ ಬೆಳ್ಳಾರೆ                                  

ಚಿತ್ರ ಕೃಪೆ: ಇಂಟರ್ನೆಟ್ ತಾಣ