ಅವಳು ಅಂದುಕೊಂಡ ಬದುಕು ಅವಳದಾಗಿರ್ಲಿಲ್ಲ. ಅವಳು ಮದುವೆಯಾದ ಮೇಲೆ ಬದಲಾಗುತ್ತೆ, ಈಗಿನ ಬದುಕಿಗಿಂತಲೂ ಉತ್ತಮವಾಗಿರುತ್ತೆ ಅನ್ನುವ ಕನಸು ಕಂಡಿದ್ದಳು. ಜೊತೆಗೆ ಕನಸು ಕಂಡಿದ್ದ ಅವನ ಮನಸಿನೊಳಗಿನ ಆಲೋಚನೆಗಳು ಅವಳಿಗೆ ತಿಳಿಯಲಿಲ್ಲ. ಅವಳ ಆಸೆಗಳನ್ನು ಕಟ್ಟಿಹಾಕಿ ಅವಳ ಆಲೋಚನೆಗಳಿಗೆ ನೀರು ಗೊಬ್ಬರವನ್ನು ನೀಡದೆ, ಹೇಳಿದ ಕೆಲಸವನ್ನ ಮಾಡಿಸಿಕೊಂಡು ನಡೆದು ನಡೆದುಕೊಳ್ಳುವ ಕೆಲಸಗಾರಳಂತೆ ಮಾಡಿಬಿಟ್ಟಿದ್ದ. ಅವನು ಹೇಳಿದಂತೆ ಕೇಳುವ ಅನಿವಾರ್ಯತೆಯನ್ನು ಸೃಷ್ಟಿಸಿದ್ದ. ಹಕ್ಕಿಯಂತೆ ಹಾರಾಡುವ ಒಲವಿನ ರೆಕ್ಕೆಯನ್ನು ಕತ್ತರಿಸಿ ಆತನ ಜೀತದಾಳಾಗಿ ಮಾಡಿಕೊಂಡ.ಅವಳಿಗರಿವಿಲ್ಲದಂತೆ ಆತನೇ ಸರ್ವಸ್ವವೆಂದು ನಂಬಿ ತನ್ನನ್ನರ್ಪಿಸಿಕೊಂಡು ಎಲ್ಲ ಕನಸುಗಳನ್ನು ಸುಟ್ಟು ಬೂದಿ ಮಾಡಿ ಬದುಕಿರುವ ಶವದಂತಾಗಿರೋದು ಅವಳ ಅರಿವಿಗೆ ಬರಲೇ ಇಲ್ಲ ಕೊನೆಯವರೆಗೂ… ಅವಳೊಳಗೆ ಅವಳ ಬದುಕು ಅದ್ಭುತವಾಗಿದೆ.

- ಧೀರಜ್ ಬೆಳ್ಳಾರೆ                                  

ಚಿತ್ರ ಕೃಪೆ: ಇಂಟರ್ನೆಟ್ ತಾಣ