ಈ ಸಹಾಯ ಮತ್ತು ಧನ್ಯವಾದ ಇಬ್ಬರು ಒಬ್ಬರನ್ನೊಬ್ಬರು ಬಿಟ್ಟಿರದ ಅತ್ಮೀಯ ಗೆಳೆಯರು. ಆದರೆ ವರ್ಷಗಳು ದಾಟುತ್ತಾ ಹೋದ ಹಾಗೆ ಇಬ್ಬರ ನಡುವೆ ಸಣ್ಣದಾಗಿದ್ದ ಬಿರುಕು ಕಂದಕವಾಗಿ ನಿರ್ಮಾಣವಾಗಿ ಬಿಟ್ಟಿತು. ಧನ್ಯವಾದ ಯಾವತ್ತೂ ಕೂಡ ಒಬ್ಬನಾಗಿ ಓಡಾಡುವುದಿಲ್ಲ. ಸಹಾಯದ ಬೆನ್ನ ಹಿಂದೆ ಇರುತ್ತೆ. ಯಾರೆಲ್ಲ ಸಹಾಯವನ್ನು ಸ್ವೀಕರಿಸ್ತಾರೋ ಅವರಿಂದ ಧನ್ಯವಾದ ಮಾತಿನ ರೂಪದಲ್ಲಿ ಕಣ್ಣಿನ ರೂಪದಲ್ಲಿ ಸ್ಪರ್ಶದಿಂದ ಕಣ್ಣೀರಿನಿಂದ ನಗುವಿನಿಂದ ಹೀಗೆ ಬೇರೆ ಬೇರೆ ರೂಪಗಳಲ್ಲಿ ದಾಟುವುದಕ್ಕೆ ಪ್ರಯತ್ನಿಸುತ್ತಿರುತ್ತದೆ. ಧನ್ಯವಾದಕ್ಕೆ ಒಬ್ಬನೇ ಬದುಕುವುದ್ದಕ್ಕೆ ಸಾದ್ಯವಿಲ್ಲ. ಅದಕ್ಕೆ ಸಹಾಯದ ಬೆನ್ನು ಹಿಂದೆ ಓಡಾಡುವುದಕ್ಕೆ ಶುರುಮಾಡಿದೆ. ಸಹಾಯವನ್ನ ನಿಮ್ಮ ಕಿಸಿಗೆ ತುಂಬಿಸಿಕೊಂಡಾಗ ಧನ್ಯವಾದವನ್ನ ದಾಟಿಸಿಬಿಡಿ ನಾನು ಹೆಚ್ಚು ಬೇರೆಯವರಿಗೆ ದಾಟಿದ ಹಾಗೆ ಹೆಚ್ಚು ಸಮಯ ಬದುಕಿರುತ್ತೇನೆ. ಬದುಕುವುದಕ್ಕೊಂದು ಅವಕಾಶ ಮಾಡಿಕೊಡಿ.

- ಧೀರಜ್ ಬೆಳ್ಳಾರೆ                                  

ಚಿತ್ರ ಕೃಪೆ: ಇಂಟರ್ನೆಟ್ ತಾಣ