ನನ್ನೇಕೆ ಒಳಗಿಟ್ಟು ಕೊಂಡಿದ್ದೀಯಾ ನಾನು ಒಳಗಿರಬೇಕಾದವನಲ್ಲ ನಾನು ಒಳಗಿರುವುದಕ್ಕೆ ಅರ್ಥವೂ ಇಲ್ಲ. ನನ್ನ ಕೆಲಸ ನಿನ್ನೊಳಗೆ ತುಂಬಿಕೊಂಡಿರುವ ಎಲ್ಲ ದುಃಖಗಳನ್ನು ಹೊರಗೆ ಹಾಕೋದು. ಅದಕ್ಕೆ ನಾನು ಕಣ್ಣೀರಿನ ರೂಪದಲ್ಲಿ ತಯಾರಾಗ್ತೇನೆ ಹಾಗಾಗಿ ಮನಸ್ಸಿನೊಳಗೇನೇ ನೋವು ಹತಾಶೆ ನಿರಾಶೆ ಮೌನಗಳಿದ್ದರೂ ಕಣ್ಣೀರಿನ ರೂಪದಲ್ಲಿ ಹೊರಗೆ ಹರಿಸಿಬಿಡು. ಕಣ್ಣೀರಿನ ನೀರಿನಲ್ಲಿ ದುಃಖ ತೊಳೆದು ಹೋಗುತ್ತೆ. ದುಃಖವಾದಾಗ ಮನಸ್ಸನ್ನು ಗಟ್ಟಿ ಹಿಡಿದು ಕಣ್ಣೀರನ್ನು ಉಳಿಸಿಕೊಳ್ಳುತ್ತೇನೆ ಅನ್ನುವ ಮೂಡತನ ಬೇಡ, ಕಣ್ಣೀರಿರುವುದೇ ಒಳಗಿನ ನೋವನ್ನು ಹೊರಗಡೆ ಹರಿಸಿಬಿಡುವುದಕ್ಕೆ. ಹಾಗಾಗಿ ಉಳಿಸಿಕೊಳ್ಳಬೇಡ ಹರಿಸಿಬಿಡು.

- ಧೀರಜ್ ಬೆಳ್ಳಾರೆ                                  

ಚಿತ್ರ ಕೃಪೆ: ಇಂಟರ್ನೆಟ್ ತಾಣ