ಕೆಲಸ ಹೇಳಿದ್ದಾರೆ ಹಾಗಾಗಿ ಗುಂಡಿ ಅಗೆಯುತ್ತಿದ್ದಾರೆ. ಇಬ್ಬರೂ ಬೆವರು ಇಳಿಸಿ ಬದಿಯಲ್ಲಿ ಕುಳಿತಾಗ ಎರಡು ದಿನದಿಂದ ಹೊಟ್ಟೆಗೆ ಏನೂ ತಿನ್ನದಿರುವುದು ನೆನಪಾಗ್ತಾ ಇತ್ತು. ಈ ದಿನದ ಕೆಲಸದಿಂದ ಸಿಗುವ ಸಣ್ಣ ಮೊತ್ತದಲ್ಲಿ ಮನೆಗೂ ತನಗೂ ಹೊಟ್ಟೆಗೆನಾದರೂ ಸಿಗಬಹುದೆನ್ನುವಾಸೆಯಿಂದ ತಲೆ ತಿರುಗಿದರೂ ಸುಸ್ತಾದರು ಗುಂಡಿ ತೆಗೆದು ನಿಲ್ಲಿಸಿದ್ದಾರೆ. ಆಗ ದೊಡ್ಡದೊಂದು ಗಾಡಿಯಲ್ಲಿ ಹೊತ್ತು ತಂದಿದ್ದ ಅನ್ನ ಸಾಂಬಾರು ಹೀಗೆ ವಿವಿಧ ಭಕ್ಷ ಉಳಿದದ್ದನ್ನು ಗುಂಡಿಯೊಳಗೆ ತುಂಬ ಕೆಲಸ ಶುರುವಾಗಿದೆ. ನೋಡುವುದಷ್ಟೇ ಕೆಲಸವಾಗಿದೆ. ಗಾಡಿ ಹೊರಟು ಹೋದ ತಕ್ಷಣ ಮಣ್ಣು ಮುಚ್ಚುವುದನ್ನ ಬಿಟ್ಟು ತನ್ನಲ್ಲಿದ್ದ ಬಟ್ಟೆಯನ್ನೇ ಬಿಡಿಸಿಟ್ಟು ಸಾಧ್ಯವಾದಷ್ಟು ತುಂಬಿಸಿ ಒಂದಷ್ಟು ಹೊಟ್ಟೆಗಿಳಿಸಿಕೊಂಡು ಮನೆಯ ಕಡೆಗೆ ಓಡಿದ್ದಾನೆ. ಮನೆಯವರೆಲ್ಲರಿಗೂ ಇಂದು ಹೊಟ್ಟೆ ತುಂಬ ಊಟ.  ಸುತ್ತಮುತ್ತ ಊರಿನ ಹಸಿದಿದ್ದವರೆಲ್ಲರೂ ಗುಂಡಿಯ ಬಳಿ ಬಂದು ತಮಗೆ ಬೇಕಾದಷ್ಟು ತೆಗೆದುಕೊಂಡು ಹೋದಾಗ ಅಲ್ಲಿದ್ದ ಬೀದಿನಾಯಿಗಳಿಗೂ ಅನ್ನ ಸಿಗದಂತಹ ಸ್ಥಿತಿ ನಿರ್ಮಾಣ ಆಯಿತು. ಗುಂಡಿ ಹಾಗೆ ಖಾಲಿ ಉಳಿಯಿತು…

- ಧೀರಜ್ ಬೆಳ್ಳಾರೆ                                  

ಚಿತ್ರ ಕೃಪೆ: ಇಂಟರ್ನೆಟ್ ತಾಣ