ಜೈಲಿನೊಳಗೆ ಕಂಬಿಗಳಿದ್ದರೂ ಒಳಗೆ ಒಂದೇ ಕೋಣೆಯಲ್ಲಿ ಇಬ್ಬರನ್ನು ಕೂಡಿ ಹಾಕಿದ್ದರೂ ಒಬ್ಬರ ಮುಖವನ್ನು ಒಬ್ಬರು ನೋಡುತ್ತಿಲ್ಲ. ಸ್ವಂತ ಅಣ್ಣ ತಮ್ಮಂದಿರಾದರೂ ಹೊಡೆದಾಟದಲ್ಲಿ ಸ್ವಂತ ತಂದೆ ತಾಯಿಯನ್ನು ಬಡಿದು ಕೊಂದ ಪಾಪಿಗಳು ಕಂಬಿಗಳನ್ನ ನೋಡುತ್ತಾ ದಿನದೊಡುತ್ತಿದ್ದಾರೆ. ಅಲ್ಲಿ ತನ್ನ ಜಾಗ ತನ್ನ ಜಾಗವೆಂದು ಬಡಿದಾಡಿಕೊಂಡ ಎರಡು ಸ್ಥಳಗಳ ನಡುವೆ ಹುಲ್ಲುಗಳು ಬೆಳೆದು ಬಳ್ಳಿಗಳು ಬೆಳೆದು ಅಕ್ಕ ಪಕ್ಕ ದಾಟಿಕೊಂಡು ಜೊತೆಯಾಗಿದೆ. ತಮ್ಮದಾಗಬೇಕೆಂದು ಬಡಿದಾಡಿಕೊಂಡವರು ಕಂಬಿ ಒಳಗೆ ಉಳಿದುಬಿಟ್ಟರೆ ನೆಲವು ತಾನೊಂದೇ ಅನ್ನುತ್ತಾ ಹಚ್ಚಹಸಿರಾಗಿ ಹಬ್ಬಿ ಗಟ್ಟಿಯಾಗಿ ನಿಂತುಬಿಟ್ಟಿದೆ.

- ಧೀರಜ್ ಬೆಳ್ಳಾರೆ                                  

ಚಿತ್ರ ಕೃಪೆ: ಇಂಟರ್ನೆಟ್ ತಾಣ