ಭಗವಂತನ ಬಳಿ ಹಲವು ದಿನಗಳ ಕಾಲ ಕಾಡಿಬೇಡಿ ಆತನನ್ನು ಒಲಿಸಿಕೊಂಡು ಜೀವನದಲ್ಲಿ ಮರೆವನ್ನ ಪೂರ್ತಿಯಾಗಿ ದಯಪಾಲಿಸು ಇದೆಲ್ಲವನ್ನು ನೆನಪಿಟ್ಟುಕೊಂಡು ಮಾಡುವುದೇನು? ಮರೆವೊಂದು ಸಿಗಲಿ ಎಂದು ಪ್ರಾರ್ಥಿಸಿದ. ಭಗವಂತ ತಥಾಸ್ತು ಎಂದು ಬಿಟ್ಟ. ಆ ಕ್ಷಣದಿಂದ ಕೆಲಸವಾದ ಕೆಲವೇ ಕ್ಷಣಗಳಲ್ಲಿ ವಿಷಯ ಮರೆತು ಹೋಗಿ ಮನಸ್ಸು ಹೊಸತನಕ್ಕೆ ಪ್ರೇರೇಪಿಸ್ತಾ ಇತ್ತು. ದೇಹ ಉತ್ಸಾಹದಲ್ಲಿದ್ದಾಗ ಬದುಕು ಹೀಗಿದ್ದರೆ ಚಂದ ಅನ್ನುವುದ್ದಕ್ಕೆ ಆರಂಭವಾಯಿತು. ಮುಪ್ಪನ್ನ ಪಡೆಯುತ್ತಾ ಹೋದ ಹಾಗೆ ಸುಮ್ಮನೆ ಕುಳಿತು ಬದುಕಿನ ಕ್ಷಣಗಳನ್ನು ಆಸ್ವಾದಿಸುವುದ್ದಕ್ಕೆ ಪ್ರಯತ್ನಿಸಿದರೂ ವಿಫಲವಾಯಿತು. ನೆನಪನ್ನ ಉಳಿಸಲು ಆದಷ್ಟು ಬೇಗ ಪ್ರಾರ್ಥಿಸಿಯೇ ಬಿಟ್ಟ. ಭಗವಂತ ಪ್ರತ್ಯಕ್ಷನಾಗಿ ಸುಮ್ಮನೆ ಅಳುವುದೇತಕೆ ಮರೆವು ನೆನಪುಗಳು ಒಂದು ನಾಣ್ಯದ ಎರಡು ಮುಖಗಳು ಅದನ್ನ ಹೊರತುಪಡಿಸಿ ಒಂದನ್ನೇ ಆಯ್ಕೆ ಮಾಡಿಕೊಂಡು ಮೂರ್ಖತನ ಎಂದು ಬಿಟ್ಟ.

- ಧೀರಜ್ ಬೆಳ್ಳಾರೆ                                  

ಚಿತ್ರ ಕೃಪೆ: ಇಂಟರ್ನೆಟ್ ತಾಣ