ಹಕ್ಕಿ ಹಣ್ಣನ್ನ ಕುಕ್ಕಿ ಕುಕ್ಕಿ ತಿನ್ನುತ್ತಿದೆ ಹೊಟ್ಟೆ ತುಂಬಿಸಿಕೊಳ್ಳುತ್ತಿದೆ ಸುತ್ತಮುತ್ತಲಿಂದ ತನಗೇನಾದರೂ ಸಮಸ್ಯೆ ಆಗಬಹುದೋ ಅನ್ನೋ ಕಾರಣಕ್ಕೆ ಅಕ್ಕಪಕ್ಕ ನೋಡುತ್ತಾ ಹಣ್ಣನ್ನ ತಿಂದು ಹೊಟ್ಟೆ ತುಂಬಿಸಿಕೊಂಡು ಹಾರಿ ಹೋಯಿತು.ಆ ಹಕ್ಕಿ ಒಂದು ಕ್ಷಣವೂ ಈ ಬೀಜ ಎಲ್ಲಿಂದ ಬಂದದ್ದು ಯಾರು ನೆಟ್ಟದ್ದು ಯಾರು ನೀರು ಹಾಕಿದ್ದು ಯಾರು ಇಷ್ಟು ಎತ್ತರ ಬೆಳೆಸುವುದಕ್ಕೆ ಕಾರಣ ಇದ್ಯಾವುದನ್ನು ಯೋಚಿಸದೆ ಆ ಕ್ಷಣದಲ್ಲಿ ಬದುಕಿ ಹೊರಟುಹೋಗಿದೆ. ಹಕ್ಕಿ ನನಗೆ ಹೇಳಿದ್ದಿಷ್ಟೆ, ನಿನ್ನ ಬದುಕಿದಿಯಲ್ಲ ಅದನ್ನ ಸಂಭ್ರಮದಿಂದ ಬದುಕಿ ಬಿಡು. ನಿನಗಿಂದು ಸಿಕ್ಕಿರುವ ಫಲ ಭಗವಂತ ನಿನಗೆ ಕೊಟ್ಟಿರುವುದು ಅದನ್ನ ಅನುಭವಿಸು ಅದರ ಹೊರತಾಗಿ ಅದರ ಹಿಂದೆ ಮುಂದೆ ನಾಳೆ ನಿನ್ನೆಗಳ ನಡುವೆ ಬದುಕುತ್ತಾ ಈ ಕ್ಷಣವನ್ನು ಮರೆತು ಬಿಡಬೇಡ. ಅದು ನಿನ್ನದು ಅಂತ ಅನ್ನಿಸಿದ್ರೆ ಸಾಕು. ಇಷ್ಟಂದು ಹಾರಿ ಹೋದ ಹಕ್ಕಿಯನ್ನು ನೋಡುತ್ತಾ ಇನ್ನೊಂದು ಹಣ್ಣನ್ನ ಕೊಯ್ದು ಮನೆಗೆ ತಂದುಬಿಟ್ಟೆ.
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!