ಸ್ವರ್ಗದೂರಿನಲ್ಲಿ ನಿಗದಿಯಾಗಿದ್ದ ಸಭೆಯಲ್ಲಿ ನಮ್ಮೂರಿಗೆ ಮಳೆ ತರುವ ಮೋಡರಾಯ ಭಾಗವಹಿಸಿರಲಿಲ್ಲ. ಅವನಿಗೆ ಅವತ್ತು ಹುಷಾರಿರಲಿಲ್ಲವಂತೆ ಹಾಗಾಗಿ ಆ ಸಭೆಯಲ್ಲಿ ಭಾಗವಹಿಸಿದ ಕಾರಣ ಯಾವತ್ತೂ ಯಾವ ಕಡೆ ಮಳೆ ಸುರಿಸಬೇಕು ಅನ್ನೋದು ತಿಳಿಲಿಲ್ಲ. ಆದರೆ ಉಳಿದ ಕಡೆಗಳಿಗೆ ಮಳೆ ಸುರಿಸಬೇಕಾದ ಉಳಿದ ಮೋಡರಾಯರುಗಳೆಲ್ಲ ಹೋಗಿ ಮಳೆ ಸುರಿಸಿ ಅವರ ಭಾರವನ್ನು ಕಡಿಮೆ ಮಾಡಿಕೊಂಡು ಇನ್ನೊಂದಷ್ಟು ನೀರನ್ನು ತುಂಬಿಕೊಂಡು ಮತ್ತೆ ಸುರಿಯುವುದಕ್ಕೆ ತಯಾರಾಗಿದ್ದಾರೆ. ನಮ್ಮ ಕಡೆಯವನು ಮಾತ್ರ ಆಗಾಗ ಸುರಿಯಬೇಕೋ ಬೇಡವೋ ಅನ್ನೋ ಯೋಚನೆಯಲ್ಲಿಯೇ ಸುರಿಸುತ್ತಾನೆ ಸುಮ್ಮನಾಗ್ತಾನೆ, ದಯವಿಟ್ಟು ನಿಮ್ಮಲ್ಲಿ ಸರಿಯಾದ ಸಭೆಯನ್ನು ನಿರ್ಣಯ ಮಾಡಿಕೊಳ್ಳಿ ಯಾವೂರಿಗೆ ಎಷ್ಟು ಮಳೆಯ ಅವಶ್ಯಕತೆ ಇದೆ ಯಾವ ತರಹದ ಬೇಳೆ ಬೆಳೆದಿದ್ದಾರೆ ಹೇಗೆ ಮಳೆ ಬಂದರೆ ಜನರ ಬದುಕು ಚೆನ್ನಾಗಿರತ್ತೆ ಎಲ್ಲಿ ನೀರಿನ ಅಭಾವ ಇದೆ ಇದೆಲ್ಲವನ್ನ ಪಟ್ಟಿ ಮಾಡಿಕೊಂಡು ಅದಾದ ನಂತರ ಆ ಪಟ್ಟಿಗೆ ಅನುಗುಣವಾಗಿ ಮಳೆ ಬರುವ ಹಾಗೆ ಮಾಡಿಕೊಳ್ಳಿ. ಮರ ಗಿಡಗಳನ್ನು ಚೆನ್ನಾಗಿ ಬೆಳೆಸಿದವರಿಗೆ ಒಳ್ಳೆಯ ಮಳೆಯನ್ನೇ ಕೊಟ್ಟುಬಿಡಿ ಹಾಗೆ ನಿಮ್ಮಲ್ಲಿ ಸರಿಯಾಗಿ ನಿರ್ಣಯಗಳಾಗದಿದ್ದರೆ ಜನ ಕಷ್ಟಪಡಬೇಕಾಗುತ್ತದೆ ದಯವಿಟ್ಟು ಇದರ ಕಡೆಗೆ ಗಮನಹರಿಸಿಬಿಡಿ.
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!