ನಿನ್ನನ್ನ ನೀನು ಏನು ಅಂತ ಅಂದುಕೊಂಡಿದ್ದೀಯಾ? ನೀನೇನು ಅದ್ಬುತ ದೊಡ್ಡ ಸಾಧಕ ನಿನ್ನಂತವರು ಈ ಭೂಮಿಯ ಮೇಲೆ ಯಾರು ಬಂದೇ ಇಲ್ಲ ಅನ್ನುವ ಆಲೋಚನೆ ನಿನ್ನದೆ. ನೀನು ಒಂದು ದಿನವಾದರೂ ನೀನು ನಡೆದ ಹಾದಿ ಹೇಗಿತ್ತು ಈಗ ಹೇಗಾಗಿದೆ ಅನ್ನೋದರ ಯೋಚನೆಯಾದರೂ ಮಾಡಿದ್ದೀಯಾ ನೀನು ಪ್ರತಿ ಹೆಜ್ಜೆಗಳನ್ನು ಇಟ್ಟು ದಾಟುತ್ತಾ ಹೋದಹಾಗೆ ಆ ದಾರಿ ಕಸದ ರಾಶಿ ಆಗಿಬಿಟ್ಟಿದೆ ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಗಳನ್ನು ಕಸಗಳನ್ನ ಬಿಸಾಡಿ ಗಲೀಜು ನಿನ್ನ ದಾರಿಯನ್ನ ಗುರುತಿಸುತ್ತಿದೆ. ಹಸಿರಾಗಿದ್ದ ಪರಿಸರ ನಿನ್ನಿಂದಾಗಿ ಪ್ಲಾಸ್ಟಿಕ್ ಗಳ ಗೂಡಾಗಿದೆ ಯಾವುದನ್ನ ಎಲ್ಲಿ ಹೇಗೆ ಬಳಸಬೇಕು ಅನ್ನುವ ಅರಿವಿಲ್ಲದ ನೀನು ವಿವೇಚನೆ ಹೊಂದಿರುವ ಬುದ್ಧಿವಂತ ಅಂತ ದೊಡ್ಡದಾಗಿ ಹೆಸರಿಟ್ಟುಕೊಂಡು ಓಡಾಡ್ತಾ ಇದ್ದೀಯ ನಿನ್ನಂತವರು ಈ ಭೂಮಿಯಲ್ಲಿದ್ದು ಪ್ರಯೋಜನವೇನು ಇಲ್ಲ ತೊಂದರೆಯ ಹೊರತು ಒಮ್ಮೆ ನಿನ್ನ ಹೆಜ್ಜೆಗಳನ್ನ ಹಿಂದಿಟ್ಟು ನೋಡು ಅದು ಶುಭ್ರವಾಗಿದ್ದರೆ ತಲೆಯೆತ್ತಿ ಬದುಕು, ಇಲ್ಲವಾದರೆ ತಲೆತಗ್ಗಿಸಿ ಭೂಮಿಯಿಂದ ತೊಲಗಿ ಬಿಡು ಪ್ರೀತಿಯಿಂದ ಕೇಳುತ್ತಿದ್ದ ಪ್ರಕೃತಿ ಇದೀಗ ನಿಷ್ಕರುಣೆಯಿಂದ ನನ್ನನ್ನು ನೋಡಿ ಮಾತನಾಡಿದಂತಾಯಿತು.

- ಧೀರಜ್ ಬೆಳ್ಳಾರೆ                                  

ಚಿತ್ರ ಕೃಪೆ: ಇಂಟರ್ನೆಟ್ ತಾಣ