ನಾನು ಜಾರಿ ಬಿದ್ದ ಮೇಲೆ ದುರಂತವೆಂದು ಎಲ್ಲಾ ಕಡೆ ಸುದ್ದಿ ಹರಿದಾಡುತ್ತಿದೆ. ಚಿತ್ರಣಗಳು ಎಲ್ಲರನ್ನು ಭಯ ಬೀಳಿಸುತ್ತೆ ನಾನು ಇಷ್ಟರವರೆಗೂ ಗಟ್ಟಿಯಾಗಿ ನಿಂತಿದ್ದವ ನನ್ನ ಮೇಲೆ ಬದುಕು ಕಟ್ಟಿಕೊಂಡ ಅಸಂಖ್ಯ ಜೀವರಾಶಿಗಳಿದ್ದವು. ನಾನು ಯಾರನ್ನು ನನ್ನ ಸ್ಥಳದಿಂದ ತೊಲಗಿಸಿದವನಲ್ಲ ಆದರೆ ನನ್ನನ್ನೇ ತೊಲಗಿಸುವುದಕ್ಕೆ ಹೊರಟ ನೀವು ನನ್ನ ಬುಡವನ್ನು ಅಲ್ಲೋಲಕಲ್ಲೋಲ ಗೊಳಿಸಿದ್ಯಾಕೆ? ನಾನು ಗಟ್ಟಿಯಾಗಿ ನಿಂತು ನಿಮ್ಮನ್ನು ಕಾಯ್ತಾ ಇದ್ದೆ ಆದರೆ ನೀವು ಯಾವಾಗ ನನ್ನ ಬುಡವನ್ನ ಅಲ್ಲಾಡಿಸುವುದಕ್ಕೆ ಶುರು ಮಾಡಿದ್ರೋ ಸಾಧ್ಯವಾದಷ್ಟು ತಾಳಿಕೊಂಡು ಈಗ ಕುಸಿದು ಬಿಟ್ಟಿದ್ದೇನೆ .ಈಗ ಆಗಿರುವ ಯಾವುದೇ ಅನಾಹುತಕ್ಕೂ ನಾನು ಕಾರಣ ಅಲ್ಲ ನೀವು ಮಾಡಿದ್ದನ್ನ ನೀವು ಅನುಭವಿಸಿದ್ದೀರಿ .ನನಗೆ ನೋವಿರೋದು ನಾನು ಹೀಗೆ ನಿಂತುಕೊಳ್ಳುವುದಕ್ಕೆ ಹಲವು ಶತಮಾನಗಳ ಕಾಲ ಕಷ್ಟಪಟ್ಟಿದ್ದೇನೆ ಆದರೆ ನಿಮಗೆ ನನ್ನನ್ನ ನೆಲದ ಮೇಲೆ ಪೂರ್ತಿಯಾಗಿ ಧರಾಶಾಯಿ ಮಾಡುವುದಕ್ಕೆ ದಿನ ಗಂಟೆಗಳು ಸಾಕಾಯ್ತು .ಇಷ್ಟು ಸಮಸ್ಯೆ ಆದರೂ ಕೂಡ ನಿಮಗಿನ್ನು ಏನೂ ಅರ್ಥ ಆಗದಿರುವುದು ವಿಪರ್ಯಾಸ. ಈಗ ಎಲ್ಲರೂ ಆಗಿರುವ ಸಮಸ್ಯೆ ತೊಂದರೆಗಳ ಬಗ್ಗೆ ಮಾತಾಡ್ತೀರಿ ಹೀಗಾಗಬಾರದು ಅಂತ ಕಥೆ ಕವನ ಬರವಣಿಗೆ ಭಾಷಣ ಎಲ್ಲವೂ ಮಾಡುತ್ತೀರಿ ಆದರೆ ಕಾರ್ಯರೂಪಕ್ಕೆ ಬಂದು ಹೆಜ್ಜೆ ಇಡುವವರು ಕಣ್ಣ ಮುಂದೆ ಕಾಣದಿರುವುದು ವಿಪರ್ಯಾಸ. ಹೀಗಂದ ಬೆಟ್ಟಗಳ ದೀರ್ಘ ಪತ್ರವೊಂದು ಕೈಗೆ ತಲುಪಿತ್ತು ನಿಮಗೆ ಕಳುಹಿಸಿದ್ದೇನೆ.
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!