ಇವನಂತವರು ಎದುರಾಗಿ ಸಿಕ್ಕರೆ ಒಮ್ಮೆ ಮಾತನಾಡಿಸಿಬಿಡಿ .ಆಗ ನಾವು ಬದುಕನ್ನು ನೋಡುವ ರೀತಿ ಬದಲಾಗಿಬಿಡುತ್ತದೆ. ಅವನು ಹೀಗಿರ್ತಾನೆ ಅಂತಂದ್ರೆ ನಮ್ಮೂರಲ್ಲೂ ಇದ್ದಾನೆ ಅವನ ಜೀವನದಲ್ಲಾಗುವ ಪ್ರತಿ ಒಂದು ಕ್ಷಣವನ್ನು ಭಗವಂತನಿಗೆ ಅರ್ಪಿಸುವವ. ನೋವು, ದುಃಖ, ಸುಖ, ಮೋಸ, ವಂಚನೆ, ಗೆಲುವು ಯಾವುದೇ ಸಿಕ್ಕಿದ್ರು ಅದನ್ನ ಭಗವಂತನಿಗೆ ಅರ್ಪಿಸುತ್ತಾನೆ. ಆತನ ಪ್ರಕಾರ ನಾವು ಇಲ್ಲಿ ಬದುಕಬೇಕು ಏನೇ ಆದರೂ ಅದು ಭಗವಂತ ನಮಗೆ ಕೊಟ್ಟಿರುವ ಪರೀಕ್ಷೆ ಅಥವ ಅವಕಾಶ. ಪರೀಕ್ಷೆಯನ್ನ ಎದುರಿಸಿ ಬದುಕಿದರೆ  ಅವನಿಗೆ ಪ್ರಿಯವಾಗ್ತೆವೆ. ಕೆಲವನ್ನು ಕಳೆದುಕೊಳ್ಳುತ್ತೇವೆ ನಮಗೋಸ್ಕರ ಕಚ್ಚಾಡುತ್ತೇವೆ ಹೆಚ್ಚು ದುಡ್ಡು ಬರಬಹುದು ಏನು ಇಲ್ಲದಂತ ಸ್ಥಿತಿಯೂ ನಿರ್ಮಾಣ ಆಗಬಹುದು. ಎಲ್ಲವೂ ಅವನಿಗೆ. ಸುಮ್ಮನೆ ಹಾಗೆ ತಲೆತಗ್ಗಿಸಿ ನಿನಗೇನು ನೀಡಬೇಕೋ ಅದನ್ನು ನೀಡು  ದೇವ ಅಂತಂದು ನಡೆದುಬಿಟ್ಟರೆ ಸಾಕು ನನ್ನ ಬದುಕಿನಲ್ಲೇನೋ ನೋವಿಲ್ಲ ಯಾತನೆ ಇಲ್ಲ ಸಂಭ್ರಮವನ್ನು ಕೂಡಿದೆ. ಹೀಗನ್ನುವವನ ಹಾಗೆ ಬದುಕುವುದಕ್ಕೆ ಸಾಧ್ಯವಿಲ್ಲ ಆ ಮಾತನ್ನು ಕೇಳಿಕೊಂಡು ಹೌದಲ್ಲ ಅಂದುಕೊಳ್ಳಬಹುದು.

- ಧೀರಜ್ ಬೆಳ್ಳಾರೆ                                  

ಚಿತ್ರ ಕೃಪೆ: ಇಂಟರ್ನೆಟ್ ತಾಣ