ನಿಮಗೆ ಹೇಳೋರು ಕೇಳೋರು ಯಾರು ಇಲ್ಲ ಅಂತನಾ? ಆ ರೀತಿಯ ಪದಬಳಕೆಯನ್ನು ಮಾಡುವುದಕ್ಕೆ ನಿಮಗೆ ಅಧಿಕಾರ ಕೊಟ್ಟವರು ಯಾರು? ನಮಗೆ ಮಾತು ಬರುವುದಿಲ್ಲ ಅನ್ನೋ ಕಾರಣಕ್ಕೆ ನಿಮ್ಮಿಷ್ಟ ಬಂದಂತೆ ಪದಬಳಕೆಯನ್ನು ಮಾಡ್ತಾ ಇದ್ದೀರಾ. ನಿನಗೆ ಹೇಳ್ತಾ ಇರೋದು ಇತ್ತೀಚಿಗೆ ಸಣ್ಣ ಬಾಲಕಿಯ ಮೇಲೆ ಹಲವಾರು ಜನ ಸೇರಿ ಅತ್ಯಾಚಾರ ಮಾಡಿದ್ದಕ್ಕೆ ಮೃಗೀಯ ವರ್ತನೆ ಅನ್ನುವ ಪದ ಬೆಳೆಸಿದ್ದೀರಿ. ನಾವು ಮೃಗಗಳು ಆದರೆ ನಾವ್ಯಾವತ್ತೂ ಆ ರೀತಿಯ ಕೆಲಸವನ್ನು ಮಾಡೇ ಇಲ್ಲ. ಮಾಡ್ತಾ ಇರೋದು ಮನುಷ್ಯರಾದ ನೀವು ಆಹಾರ ಬೇಕಾದಾಗ ಕೊಂದು ತಿನ್ನುತ್ತೇವೆ ಅದು ನಮ್ಮ ಧರ್ಮ. ಅದರ ಹೊರತು ಹೆಣ್ಣು ಮಕ್ಕಳನ್ನ ಮುಗ್ಧರನ್ನ ಅತ್ಯಾಚಾರ ಮಾಡಿ ಕೊಲ್ಲುವಂತಹ ನಿಕೃಷ್ಟರು ನಾವಲ್ಲ. ಇನ್ನೊಬ್ಬರ ನೋವಿಗೆ ಕರಗುವ ಹೃದಯ ನಮ್ಮದು .ನಾವು ಮೋಸ ವಂಚನೆ ಮಾಡುವುದಿಲ್ಲ ನೀವು ಮಾಡಿದ ಕೆಟ್ಟ ಕೆಲಸಗಳಿಗೆ ನಮ್ಮ ಹೆಸರನ್ನು ಬಳಸುವಂತದ್ದು ತಪ್ಪು. ಮನುಷ್ಯರಾದ ನೀವು ಮಾಡದನ್ನ ನಮ್ಮ ಮೇಲೆ ಹೇರಬೇಡಿ. ಎಚ್ಚರ. ಇವತ್ತು ನಮ್ಮ ಮನೆ ಮುಂದುಗಡೆ ಬಂದ ಒಂದಷ್ಟು ಪ್ರಾಣಿಗಳು ಎಚ್ಚರಿಸಿದ ಮಾತುಗಳು ಅದು ಹೌದು ತಪ್ಪು ನಮ್ಮದಿರುವಾಗ ಅವರ ಹೆಸರನ್ನು ಬಳಸುವುದು ತಪ್ಪಲ್ಲವೇ?
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!