ಅವರಿಬ್ಬರೂ ಎದುರು ಬದುರು ನಿಂತು ಮಾತುಕತೆ ಶುರು ಮಾಡಿದರು. ಇಬ್ಬರೂ ಏನು ದೊಡ್ಡ ಪರಿಚಯ ಅಲ್ಲ ಅದಲ್ಲದೆ ಅವರ ಮಾತುಕತೆಗೆ ಪರಿಚಯ ಬೇಕಿಲ್ಲ. ಅವನ ಪ್ರಶ್ನೆ ನಿಮ್ಮ ಊರು ಹೇಗೆ ನಮ್ಮೂರು ಹೇಗಂದ್ರೆ ಅಡಿಕೆ ಕದ್ದವನ ಸುದ್ದಿ ಊರೆಲ್ಲಾ ಗೊತ್ತಾಗಿ ಮರ್ಯಾದೆಗಂಜಿ ಜೈಲ್ ಒಳಗೆ ಹೋಗಿ ಬಂದು ತಲೆತಗ್ಗಿಸಿ ಜೀವನ ಮಾಡುತ್ತಾನೆ, ಬ್ಯಾಂಕುಗಳ ಒಳಗೆ ಕೋಟಿ ಕೋಟಿ ತಿಂದವರು ತಲೆ ಎತ್ತಿ ಮೆರೆದಾಟ ಮಾಡಿ ಊರೇ ಬಿಟ್ಟುಬಿಡುತ್ತಾರೆ. ಸರ್ಕಾರದಲ್ಲಿ ಕೆಲಸ ಮಾಡುವವರ ಮಕ್ಕಳು ಪ್ರೈವೇಟ್ ಶಾಲೆಲಿ ಓದಿದ್ರೆ, ಸರ್ಕಾರವನ್ನ ಕಟ್ಟಿದ ಜನರ ಮಕ್ಕಳು ಸರ್ಕಾರಿ ಶಾಲೆಯಲ್ಲಿ ಓದಬೇಕು. ಭಾಷಣದಲ್ಲಿ ಹೇಳುವ ವಿಷಯಗಳು ಯಾವುದೂ ನಿಜ ಜೀವನದಲ್ಲಿ ಆಗುವುದೇ ಇಲ್ಲ. ಎಲ್ಲರಿಗೂ ಎಲ್ಲ ಕಡೆಗೂ ಅರ್ಜೆಂಟು ಆದರೆ ಸಮಯವನ್ನ ಯಾರು ಪಾಲಿಸುವುದಿಲ್ಲ, ನಾವೆಲ್ಲರೂ ಒಂದೂ ಅಂತ ಭಾಷಣ ಮಾಡುತ್ತಾರೆ ಜಾತಿ ವಿಷಯ ತಗೊಂಡು ಕಚ್ಚಾಡ್ತಾರೆ . ದೊಡ್ಡವರ ಕೇಸ್ ಗಳು ದಿನಗಳಲ್ಲಿ ಸರಿಹೊಂದಿಸಲ್ಪಟ್ಟರೆ ಬಡವರು ವರ್ಷ ಪೂರ್ತಿ ಅಲೆದರೂ ಕೂಡ ನ್ಯಾಯ ಸಿಗುವುದಿಲ್ಲ. ಮಳೆಗಾಲದಲ್ಲಿ ನೀರು ಉಳಿಸುವುದರ ಬಗ್ಗೆ ಯೋಚನೆ ಮಾಡದವರು ಬೇಸಿಗೆಕಾಲದಲ್ಲಿ ಇಂಗು ಗುಂಡಿ ತೆಗಿಬೇಕು ಅಂತ ಮಾತಾಡ್ತಾರೆ...ಹೀಗೆ ಸಾಗುತ್ತೆ...ನಮ್ಮ ಊರೂ ಇದಕ್ಕಿಂತ ಬೇರೆನಿಲ್ಲ ಬೇರೆಯವರ ಊರಿನ ಬಗ್ಗೆನೂ ಕೇಳೋಣ ಏನಂತೀರಾ…?
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!