ಆರು ತಿಂಗಳ ಮಗುವಿನ ದೇಹದಲ್ಲಿ ಉಂಟಾದ ಸಣ್ಣ ಏರುಪೇರು ಅಪ್ಪನ ಮನಸ್ಸನ್ನು ಒಂದು ಸಲಕ್ಕೆ ಧೈರ್ಯ ಕೆಡುವಂತೆ ಮಾಡಿತು. ಆಸ್ಪತ್ರೆಯ ಬಳಿಗೆ ಹೋಗಿ ಮದ್ದು ತೆಗೆದುಕೊಂಡರೂ ಭಯ ಒಳಗೆ ಹಾಗೆ ಉಳಿದಿತ್ತು. ಊರಿನ ದೇವರಲ್ಲಿ ಕೈ ಮುಗಿದು ಪ್ರಾರ್ಥಿಸಿದರು. ಮಗು ಆರೋಗ್ಯವಾದರೆ ನಿಮ್ಮ ಬಳಿಗೆ ಬಂದು ಕೈಮುಗಿದು ಹರಕೆ ತೀರಿಸುತ್ತೇನೆ ಅಂತ. ದಿನಗಳಲ್ಲಿ ಮಗು ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿತ್ತು ಮಗುವಿನ ಮುಖದಲ್ಲಿ ನಗು ತಂದೆಯ ಮುಖದಲ್ಲಿ ನೆಮ್ಮದಿ. ದಿನಗಳ ಉರುಳಿದಂತೆ ಕೇಳಿದ ಹರಕೆ ಮರೆತು ಹೋಯಿತು. ಎಲ್ಲಾ ಊರುಗಳ ತಿರುಗಾಟ ನಡೆದರೂ ಊರ ದೇವರ ಬಳಿ ಕೈಮುಗಿದರೆ ಹೊರತು ಹರಕೆ ತೀರಿಸಲಿಲ್ಲ. ವರ್ಷಗಳೆರಡಾಗುವಷ್ಟರಲ್ಲಿ ಮಗುವಿನ ದೇಹದಲ್ಲಿ ಮತ್ತೆ ಅನಾರೋಗ್ಯದ ಸೂಚನೆ ಕಂಡು ಬಂತು. ವೈದ್ಯರ ಮದ್ದಿನಿಂದ ಮಗುವಿನ ಆರೋಗ್ಯದಲ್ಲಿ ಬದಲಾವಣೆ ಕಂಡು ಬಂದರೂ ಅಪ್ಪನ ಮನಸಲ್ಲಿ ಧೈರ್ಯ ಬರಲಿಲ್ಲ. ಕೈಮುಗಿದು ಬೇಡಿದ ಹರಕೆ ನೆನಪಾಯಿತು. ದೇವರ ಬಳಿಗೆ ಓಡೋಡಿ ಹರಕೆಯನ್ನರ್ಪಿಸಿ ಕೈ ಮುಗಿದು ಬಿಟ್ರು ಕಾಕತಾಳಿಯವೋ ಏನೋ ಮಗುವಿನ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂತು. ಆದರೆ ಒಂದು ಪ್ರಶ್ನೆ ಹರಕೆ ಬೇಡಿದ್ದು ನಾವು ತೀರಿಸಬೇಕಾದ್ದು ನಾವು. ಭಗವಂತ ನಮಗೇನಾದರೂ ಮಾಡಿ ಎಚ್ಚರಿಕೆ ನೀಡಬೇಕಾಗಿತ್ತು. ದೇವರಂತ ಮಗುವಿಗೆ ದೇವರೇ ಏಕೆ ಶಿಕ್ಷೆ ಕೊಟ್ಟ?
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!