ಸಂಜೆಯಾದರೆ ನಮ್ಮ ಮನೆ ಮುಂದಿನ ರಸ್ತೆಯಲ್ಲಿ ಇಬ್ಬರೂ ಜೊತೆಯಾಗಿ ನಡೆದುಕೊಂಡು ಹೋಗ್ತಾರೆ. ತಲೆ ಕೂದಲು ಹಣ್ಣಾಗಿದೆ, ದೇಹ ಸ್ವಲ್ಪ ಬಾಗಿದೆ .ಆದರೆ ನಾನು ಬಂದು ವರ್ಷ 20 ಆದರೂ ಒಂದು ದಿನವೂ ಸಂಜೆ ಅವರು ನಡೆಯುವುದನ್ನು ನಿಲ್ಲಿಸಿಲ್ಲ. ಪ್ರತಿದಿನವೂ ನಡಿಗೆಯಲ್ಲಿ ಮಾತುಕತೆ ಮುಂದುವರೆಯುತ್ತಿರುತ್ತದೆ. ಒಂದು ದಿನವು ಮೌನದಿಂದ ಸಿಟ್ಟಿನಿಂದ ಅವರ ಚಲಿಸಿದ್ದನ್ನ ನಾನು ನೋಡಲೇ ಇಲ್ಲ. ಬದುಕಿನಲ್ಲಿ ಇಷ್ಟು ಮಾತನಾಡುವುದಕ್ಕಿದೆ ಅಂತ ಅವರನ್ನು ನೋಡಿದಾಗಲೇ ಅರ್ಥವಾಗುತ್ತದೆ.ಕಲ್ಲು ಬೆಂಚಿನಲ್ಲಿ ಕುಳಿತ ಅವರಲ್ಲಿ ಮಾತನಾಡಿಸಿದೆ ,ನಿಮ್ಮ ಬದುಕಿನ ಇಷ್ಟು ವರ್ಷಗಳ ದೀರ್ಘ ನಡಿಗೆಗೆ ಕಾರಣವೇನು ಅಂತ. ಅವರ ಉತ್ತರ ಇಷ್ಟೇ ಹೊಂದಾಣಿಕೆ ಕ್ಷಮೆ ಪ್ರೀತಿ ತ್ಯಾಗ ಈ ನಾಲ್ಕು ನಮ್ಮ ಬದುಕನ್ನು ಇವತ್ತಿನವರೆಗೂ ಕರೆದುಕೊಂಡು ಬಂದಿದೆ. ಇಬ್ಬರೂ ಕ್ಷಮೆ ಕೇಳುವುದಕ್ಕೆ ಕಾಯ್ತಾ ಇರ್ತೇವೆ. ಹೊಂದಾಣಿಕೆ ನಮ್ಮ ಬದುಕನ್ನ ಇವತ್ತಿನವರೆಗೂ ಬದುಕಿಸಿದೆ. ಎಲ್ಲರಿಗೂ ಇದು ಅರ್ಥವಾಗಿ ಬಿಟ್ಟರೆ ನಮಗಿಂತಲೂ ಅದ್ಭುತವಾದ ಬದುಕನ್ನ ಬದುಕಬಹುದು. ಕಣ್ಣಿಗೆ ಕಿವಿಗೆ ವಿಷಯಗಳು ಸಾವಿರ ಸಿಗ್ತವೆ. ಅವುಗಳನ್ನ ಮಾತಿಗೆಳೆದುಕೊಂಡು ನಮ್ಮ ಬದುಕಿಗೆ ಪೂರಕವಾಗಿ ಹೊಂದಿಸಿಕೊಳ್ಳುವುದು ನಮ್ಮ ಜವಾಬ್ದಾರಿ ನಾವು ಆ ಕೆಲಸ ಮಾಡ್ತಾ ಇದ್ದೇವೆ. ಅದಿಕ್ಕೆ ಬದುಕಿನ್ನೂ ಜೀವಂತವಾಗಿದೆ. ಹಾಗೆ ನಕ್ಕು ಮುಂದುವರೆದು ಬಿಟ್ಟರು. ನನ್ನ ಸಂಗಾತಿ ಮತ್ತು ನಾನು ಕೈಯಲ್ಲಿ ಮೊಬೈಲ್ ಹಿಡಿದು ನಡೆಯುತ್ತಿದ್ದ ನಡಿಗೆ ಆ ದಿನಕ್ಕೆ ಕೊನೆಯಾಗಿ ಅಂದಿನಿಂದ ಮಾತುಕತೆಗೆ ಶುರುವಿಟ್ಟುಕೊಂಡೆವು
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!