ಇಷ್ಟು ದಿನ ಮಾತಾಡ್ಲಿಲ್ಲ ಹಾಗಾಗಿ ಇವತ್ತು ಮಾತನಾಡಲೇಬೇಕು ಇಲ್ಲದಿದ್ದರೆ ಇದೆಲ್ಲರಿಗೂ ಮರೆತೆ ಹೋಗಿ ಬಿಡುತ್ತೆ. ನಾನು ಹುಲಿ. ನೀವೆಲ್ಲರೂ ಪುಣ್ಯಕೋಟಿ ಕಥೆ ಕೇಳಿದ್ದೀರಿ ಅದರಲ್ಲಿ ನಿಮ್ಮ ದನವನ್ನು ಎತ್ತರಕ್ಕೆ ಏರಿಸಿ ಕೊಂಡಾಡಿದ್ದೀರಿ. ಆದರೆ ಅವತ್ತು ಸತ್ತ ನನ್ನ ಕುಟುಂಬದ ಹುಲಿರಾಯ ಆತ ಮಕ್ಕಳನ್ನು ಕಳೆದುಕೊಂಡ ಹೆಂಡತಿ ತಂದೆ ತಾಯಿ ಬಂಧು ಬಳಗ ಎಲ್ಲರಿಂದ ದೂರಾಗಿ ಬಿಟ್ಟ ನಮ್ಮವರೆಲ್ಲೂ ಅನಾಥರಾಗಿದ್ದರು ಆತನನ್ನ ನಂಬಿ ಒಂದು ಕುಟುಂಬವಿತ್ತು. ಆದರೆ ನೀವು ಯಾರು ಯಾಕೆ ಆ ಹುಲಿರಾಯನ ಕುಟುಂಬದ ಬಗ್ಗೆ ಯೋಚನೆ ಕೂಡ ಮಾಡ್ಲಿಲ್ಲ. ಅಲ್ಲ ಒಂದು ಯೋಚನೆ ಮಾಡಿ ಆ ಕ್ಷಣದಲ್ಲಿ ಆ ಹುಲಿರಾಯನಿಗೆ ಸಾಯುವುದು ಬಿಟ್ಟು ಬೇರೆ ಯಾವ ಅವಕಾಶವಿದೆ. ಏಕೆಂದರೆ ಆತ ತಿನ್ನುವುದು ಮಾಂಸ. ಪುಣ್ಯಕೋಟಿಯನ್ನ ಬಿಟ್ಟ ಮೇಲೆ ಬೇರೆ ಯಾವುದೇ ದನವನ್ನು ಮುಟ್ಟುವುದಿಲ್ಲ ಅಂತಲೇ ಅರ್ಥ. ಹಾಗಿದ್ದ ಮೇಲೆ ಉಪವಾಸದಿಂದ ಸಾಯುದೇತಕೆ ಅನ್ನುವ ಕಾರಣ ಆತ ಪ್ರಾಣವನ್ನರ್ಪಿಸಿದ. ದನವು ಮತ್ತೆ ಹೋಗಿ ತನ್ನ ಮಕ್ಕಳನ್ನು ಭೇಟಿಯಾಯಿತು ಸಂಬಂಧಿಕರ ಜೊತೆ ಮಾತನಾಡಿತು. ಆದರೆ ಹುಲಿರಾಯನ ಕುಟುಂಬ ಅನಾಥವಾಯಿತಲ್ಲ ಇದರ ಬಗ್ಗೆ ಯಾರು ಪ್ರಶ್ನೆ ಮಾಡುವುದಿಲ್ಲ ಮಾತಾಡುವುದಿಲ್ಲ ಹಾಗಾಗಿ ಈಗ ನಾನು ಬಂದಿದ್ದೇನೆ ನನಗೆ ಉತ್ತರ ಬೇಕು ಅದು ನಿಮ್ಮಿಂದಲೇ…

- ಧೀರಜ್ ಬೆಳ್ಳಾರೆ                                  

ಚಿತ್ರ ಕೃಪೆ: ಇಂಟರ್ನೆಟ್ ತಾಣ