ಪ್ರತಿ ಸಂಜೆಯೂ ಆಕಾಶ್ ಆಕಾಶದತ್ತ ನೋಡುತ್ತಿದ್ದ. ಮಿನುಗುವ ನಕ್ಷತ್ರಗಳನ್ನು ಕಂಡು ನಾನೂ ಒಂದು ನಕ್ಷತ್ರವಾಗಬೇಕು. ಎಲ್ಲರೂ ನನ್ನನ್ನು ನೋಡಬೇಕು. ನನ್ನ ಬೆಳಕು ಎಲ್ಲೆಡೆ ಹರಡಬೇಕು. ಪ್ರಯತ್ನ ಜಾರಿಯಲ್ಲಿತ್ತು. ಅವನು ಎಷ್ಟೇ ಪ್ರಯತ್ನಿಸಿದರೂ ನಕ್ಷತ್ರವಾಗಲು ಸಾಧ್ಯವಾಗಲೇ ಇಲ್ಲ. ದಿನಗಳು ಕಳೆದುಹೋದವು. ಆಸೆ ಮಾತ್ರ ಕಡಿಮೆಯಾಗಲಿಲ್ಲ. ಒಂದು ರಾತ್ರಿ, ನಿರಾಶೆಯಿಂದ ನೆಲದ ಮೇಲೆ ಕುಳಿತಿದ್ದಾಗ, ಅವನ ಕಣ್ಣಿಗೆ ಒಂದು ಪುಟ್ಟ ಎಣ್ಣೆದೀಪ ಕಾಣಿಸಿತು. ಅದು ಸಣ್ಣದಾಗಿದ್ದರೂ ತನ್ನ ಸುತ್ತಲಿನ ಕತ್ತಲನ್ನು ದೂರ ಮಾಡುತ್ತಿತ್ತು ''ಆಕಾಶದಲ್ಲಿ ಮಿನುಗುವುದೇ ಮಹತ್ವವಲ್ಲ. ಕತ್ತಲಿರುವಲ್ಲಿ ಬೆಳಗುವುದೇ ಬದುಕಿನ ಸಾರ್ಥಕತೆ. "ಅವನು ನಕ್ಷತ್ರವಾಗುವ ಕನಸನ್ನು ಬಿಟ್ಟು, ತನ್ನೊಳಗಿನ ಬೆಳಕನ್ನು ಹಚ್ಚಿಕೊಂಡನು. ಜ್ಞಾನ ಹಂಚಿದನು. ಪ್ರೀತಿ ಹಂಚಿದನು. ದುಃಖದಲ್ಲಿದ್ದವರಿಗೆ ಧೈರ್ಯ ನೀಡಿದನು. ದಾರಿ ತಪ್ಪಿದವರಿಗೆ ದಾರಿ ತೋರಿಸಿದನು. ಕಾಲ ಕಳೆದಂತೆ, ಅವನ ಬೆಳಕಿನಿಂದ ಇನ್ನೂ ಅನೇಕ ಜನರ ಬದುಕಿನಲ್ಲಿ ದೀಪಗಳು ಹೊತ್ತಿಕೊಂಡವು. ಒಂದು ದಿನ ಆಕಾಶದ ನಕ್ಷತ್ರಗಳು ನೀನು ನಮಗಿಂತ ಎತ್ತರದಲ್ಲಿದ್ದೀಯಾ, ಅದ್ಭುತಗಳನ್ನ ಸಾಧಿಸಿದ್ದೀಯಾ, ಹೆಚ್ಚು ಬೆಳಗ್ತಿದ್ದೀಯಾ, ನಾವು ದೂರದಲ್ಲಿ ಹೊಳೆದರೆ ನೀನು ಎಲ್ಲರೊಳಗೆ ಬೆಳಗಿದ್ದೀಯಾ ಇದು ಸಾಧನೆ ...ಆಕಾಶ್ ಗೆ ಬದುಕಿನ ಸಾರ್ಥಕತೆ ಕಾಣಿಸಿತು.
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!