ನಗರದ ವೇದಿಕೆಗಳ ಮೇಲೆ ದೊಡ್ಡ ದೊಡ್ಡ ಮಾತುಗಳು ಮೊಳಗುತ್ತಿದ್ದವು.''ಹೀಗೆ ಬದುಕಬೇಕು... ಹಾಗೆ ಯೋಚಿಸಬೇಕು... ಯಶಸ್ಸು ಎಂದರೆ ಇದೇ...''ಎಂದು ಇನ್‌ಫ್ಲುಯೆನ್ಸರ್‌ಗಳು ಸಾವಿರಾರು ಜನರಿಗೆ ಬದುಕಿನ ಪಾಠ ಹೇಳುತ್ತಿದ್ದರು.ಅದೇ ಸಮಯದಲ್ಲಿ... ಒಂದು ಪುಟ್ಟ ಹಳ್ಳಿಯಲ್ಲಿ ಒಬ್ಬ ತಾಯಿ ಬೆಳಗ್ಗೆ ಎದ್ದು ಮನೆಯ ಅಂಗಳ ಸಾರಿಸಿ, ತುಳಸಿಗೆ ನೀರು ಹಾಕಿ, ಮಕ್ಕಳಿಗೆ ಊಟ ಬಡಿಸಿ, ಗಂಡನೊಂದಿಗೆ ನಗು ಹಂಚಿಕೊಂಡು ದಿನ ಕಳೆಯುತ್ತಿದ್ದಳು.ಅವಳಿಗೆ ಇನ್‌ಸ್ಟಾಗ್ರಾಂ ಗೊತ್ತಿರಲಿಲ್ಲ. ಯೂಟ್ಯೂಬ್ ಗೊತ್ತಿರಲಿಲ್ಲ. ಮೋಟಿವೇಷನಲ್ ಭಾಷಣಗಳೂ ಗೊತ್ತಿರಲಿಲ್ಲ. ಅಮ್ಮನಿಗೆ ಗೊತ್ತಿದ್ದದ್ದು ಒಂದೇ.ಮನೆಯಲ್ಲಿ ನಗುವಿದ್ದರೆ ಅದೇ ಬದುಕೂ ಅಂತ...ಕಾಲವೇ ಬೇರೆ ಬೇರೆ.
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!