ಹುಟ್ಟಿದ ಕೆಲವೇ ದಿನಗಳಲ್ಲಿ ವಿಧಿ ಅವನ ಎರಡೂ ಕಾಲುಗಳ ಮೇಲೆ ಬರೆ ಬರೆದಿತ್ತು. ಪೋಲಿಯೋ ಅವನ ಕಾಲುಗಳನ್ನು ಕಸಿದುಕೊಂಡಿತು.ಬಾಲ್ಯದಲ್ಲಿ ಎಲ್ಲರೂ ಓಡುತ್ತಿದ್ದರೆ, ಅವನು ದೂರದಲ್ಲಿ ಕುಳಿತು ನೋಡುತ್ತಿದ್ದ. ಕೆಲವೊಮ್ಮೆ ಮನಸ್ಸು ಕೇಳುತ್ತಿತ್ತು...''ನಾನೇಕೆ ಹೀಗೆ?" ಆ ಪ್ರಶ್ನೆಗೆ ಉತ್ತರ ಯಾರೂ ಕೊಡಲಿಲ್ಲ.
ಉತ್ತರ ಹುಡುಕಿದ."ದೇವರು ಕಾಲುಗಳನ್ನು ಕೊಡಲಿಲ್ಲ. ಆದರೆ ಯೋಚಿಸುವ ತಲೆ ಕೊಟ್ಟಿದ್ದಾನೆ. ಕೆಲಸ ಮಾಡುವ ಕೈ ಕೊಟ್ಟಿದ್ದಾನೆ."ಆ ದಿನದಿಂದ ಅವನು ತನ್ನ ನೋವಿನ ಬಗ್ಗೆ ಯೋಚಿಸುವುದನ್ನು ಬಿಟ್ಟು, ತನ್ನ ಸಾಮರ್ಥ್ಯದ ಬಗ್ಗೆ ಯೋಚಿಸಲು ಆರಂಭಿಸಿದ.ಕಾಲುಗಳು ನಡೆಯಲಿಲ್ಲ... ಆದರೆ ಆಲೋಚನೆಗಳು ಓಡಿದವು. ದೇಹ ಎದ್ದುನಿಲ್ಲಲಿಲ್ಲ...ಆದರೆ ಆತ್ಮವಿಶ್ವಾಸ ಎತ್ತರಕ್ಕೆ ಏರಿತು. ವರ್ಷಗಳು ಕಳೆದವು. ಇಂದು ಅವನು ಒಂದು ಸಂಘಟನೆಯ ಅಧ್ಯಕ್ಷ. ಅವನು ಇನ್ನೂ ಕುಳಿತೇ ಇರುತ್ತಾನೆ. ಆದರೆ ಅವನ ಒಂದು ನಿರ್ಧಾರಕ್ಕೆ ಊರು ಎದ್ದು ನಿಲ್ಲುತ್ತದೆ. ಅವನು ಒಂದು ಮಾತು ಹೇಳಿದರೆ ನೂರಾರು ಕೈಗಳು ಕೆಲಸಕ್ಕೆ ಇಳಿಯುತ್ತವೆ.ಅವನ ಕಾಲುಗಳು ನಡೆಯಲಿಲ್ಲ...ಆದರೆ ಅವನ ಕನಸುಗಳು ಇಡೀ ಊರನ್ನು ನಡೆಯುವಂತೆ ಮಾಡಿವೆ.
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!