ಕಾಲೇಜು ಜೀವನದಲ್ಲಿ ನಾವು ಯಾರನ್ನೂ ಆಯ್ಕೆ ಮಾಡಿಕೊಳ್ಳಲಿಲ್ಲ. ಆದರೆ ಜೀವನವೇ ಕೆಲವರನ್ನು ನಮ್ಮ ಬಳಿ ತಂದು ನಿಲ್ಲಿಸಿತ್ತು.ಒಂದೇ ಬೆಂಚು...ಒಂದೇ ಕನಸು...ಒಂದೇ ನಗು...ಒಂದೇ ನೋವು...ಅವರಿಲ್ಲದೆ ಬದುಕೇ ಇಲ್ಲ ಎನ್ನುವಷ್ಟು ಹತ್ತಿರವಾಗಿದ್ದೆವು. ನಮ್ಮಲ್ಲಿ ಒಬ್ಬನು ದಾರಿ ತಪ್ಪಿದ.
ಅವನನ್ನು ಕಳೆದುಕೊಳ್ಳಲು ಮನಸ್ಸಿರಲಿಲ್ಲ.ಅದಕ್ಕಾಗಿ ಅವನ ತಪ್ಪನ್ನು ಸರಿಯೆಂದು ಹೇಳಲಿಲ್ಲ. "ಹಿಂದಿರುಗು..." ಎಂದು ಕೈ ಚಾಚಿದೆವು.ಆದರೆ ಅವನು ನಮ್ಮ ಕೈ ಹಿಡಿಯಲಿಲ್ಲ.ಬದಲಿಗೆ... ನಮ್ಮನ್ನೇ ಬಿಟ್ಟು ಹೋದ.ಕಾಲ ಯಾರಿಗಾಗಿ ನಿಲ್ಲುವುದಿಲ್ಲ. ವರ್ಷಗಳು ಉರುಳಿದವು.
ಇಂದು ಅವನ ಮೊಬೈಲ್ ಪರದೆಯ ಮೇಲೆ ಪ್ರತಿದಿನ ಗೆಳೆತನದ ಬಗ್ಗೆ ದೊಡ್ಡ ದೊಡ್ಡ ಮಾತುಗಳು ಕಾಣಿಸುತ್ತವೆ. ಗೆಳೆಯರೇ ನಿಜವಾದ ಸಂಪತ್ತು...""ಗೆಳೆತನ ಎಂದಿಗೂ ಸಾಯುವುದಿಲ್ಲ..."ಎಂದು ಬರೆಯುವ ಪ್ರತಿಯೊಂದು ಸಾಲಿನ ಕೆಳಗೆ ಸಾವಿರಾರು ಮೆಚ್ಚುಗೆಗಳು.ಆದರೆ...
ಆ ಬರಹಗಳನ್ನು ಓದುವಾಗ ನನಗೆ ಅವನ ಪದಗಳು ಕಾಣುವುದಿಲ್ಲ.ಒಮ್ಮೆ ಅವನಿಗಾಗಿ ಕಾದಿದ್ದ ನಮ್ಮ ಕಣ್ಣುಗಳು ಮಾತ್ರ ನೆನಪಾಗುತ್ತವೆ. ಈಗಲೂ ಅತನ ತಪ್ಪನ್ನ ಒಪ್ಪಿದವರು ಮಾತ್ರ ಆತನ ಬಳಗದ ಜೊತೆ ಇದ್ದಾರೆ. ತನ್ನೊಳಗಿನ ತಪ್ಪಿನ ಅರಿವಿದ್ದರೂ ಉಳಿದವರಿಗೆ ಬದುಕಿನಪಾಠ ಹೇಳುವಾಗ ಅಸಹ್ಯ ಅನ್ನಿಸುತ್ತೆ ಸರ್ ಇದಕ್ಕೆ ಏನು ಮಾಡೋದು ನವೀನ ಪ್ರಶ್ನೆಗಳನ್ನ ಮುಂದಿಟ್ಟ.. ಉತ್ತರವಿರಲಿಲ್ಲ ನನ್ನಲ್ಲಿ ಅದಕ್ಕೆನಿಮ್ಮಿಂದ ಉತ್ತರದ ಬೇಡಿಕೆ
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!