ಅಪ್ಪ-ಅಮ್ಮ ತಮ್ಮ ಮಗನನ್ನು ಅಪಾರ ನಂಬಿಕೆ ಮತ್ತು ಪ್ರೀತಿಯಿಂದ ಬೆಳೆಸುತ್ತಿದ್ದರು. ಇಂದು ಅವನ ಹುಟ್ಟುಹಬ್ಬ. "ನಮ್ಮ ಮಗ ಖುಷಿಯಾಗಿರಬೇಕು'' ಎಂಬ ಒಂದೇ ಆಸೆಯಿಂದ ಹಲವು ದಿನಗಳಿಂದ ಸರ್ಪ್ರೈಸ್‌ಗಾಗಿ ಸಿದ್ಧತೆ ಮಾಡಿದ್ದರು. ಕೆಲವೊಮ್ಮೆ ನಾಟಕವಾಡಿದರು, ಕೆಲವೊಮ್ಮೆ ಸುಳ್ಳು ಕೋಪ ತೋರಿಸಿದರು, ಇನ್ನೊಮ್ಮೆ ಅವನಿಗೆ ಗೊತ್ತಾಗದಂತೆ ಎಲ್ಲ ವ್ಯವಸ್ಥೆ ಮಾಡಿದರು. ಹುಟ್ಟುಹಬ್ಬದ ಶುಭಾಶಯಗಳು!'' ಎಂದಾಗ, ಅಪ್ಪ, ಅಮ್ಮ ಮತ್ತು ಮಗ-ಮೂವರ ಕಣ್ಣಲ್ಲೂ ಕಣ್ಣೀರು

ಅಪ್ಪ-ಅಮ್ಮನ ಕಣ್ಣೀರು, "ನಮ್ಮ ಮಗನಿಗೆ ಸಂತೋಷ ಕೊಡಲು ಸಾಧ್ಯವಾಯಿತು" ಎಂಬ ತೃಪ್ತಿಯದು.ಮಗನ ಕಣ್ಣೀರು, "ನನ್ನ ಜೀವನದಲ್ಲಿ ದೇವರು ಕೊಟ್ಟ ಅಮೂಲ್ಯ ರತ್ನಗಳು ಇವರಿಬ್ಬರೇ" ಎಂಬ ಕೃತಜ್ಞತೆಯದು.ಆ ಕ್ಷಣವನ್ನು ನೋಡಿದ ಪ್ರತಿಯೊಬ್ಬರಿಗೂ ಒಂದು ಸತ್ಯ ಅರ್ಥವಾಯಿತು. ಮನೆಯಲ್ಲಿ ಮಕ್ಕಳು ತಂದೆ-ತಾಯಿಯ ಮಹತ್ವ ಅರಿಯಬೇಕಾದರೆ, ಮೊದಲು ಅವರನ್ನು ತಮ್ಮವರಂತೆ ಅರ್ಥಮಾಡಿಕೊಳ್ಳಬೇಕು, ಅವರ ಮೇಲೆ ನಂಬಿಕೆ ಇಡಬೇಕು. ಹಾಗೆಯೇ ಮಕ್ಕಳು ತಂದೆ-ತಾಯಿಯ ಮಾತಿಗೆ ಗೌರವ ಮತ್ತು ಮೌಲ್ಯ ನೀಡಬೇಕು.ನಂಬಿಕೆ, ಪ್ರೀತಿ ಮತ್ತು ಪರಸ್ಪರ ಗೌರವ ಇರುವ ಮನೆಯಲ್ಲಿ ಸಂತೋಷ ಶಾಶ್ವತವಾಗಿರುತ್ತದೆ.ಆ ಒಂದು ಹುಟ್ಟುಹಬ್ಬದ ಸಂಭ್ರಮ, ಅಲ್ಲಿದ್ದ ಪ್ರತಿಯೊಬ್ಬರಿಗೂ ಬದುಕಿನ ಅದ್ಭುತ ಪಾಠವನ್ನು ಕಲಿಸಿತು.

- ಧೀರಜ್ ಬೆಳ್ಳಾರೆ                                  

ಚಿತ್ರ ಕೃಪೆ: ಇಂಟರ್ನೆಟ್ ತಾಣ