ಮಳೆ ಸುರಿಯುತ್ತಿತ್ತು.ಒಂದು ಪುಟ್ಟ ಬೆಕ್ಕಿನ ಮರಿ ರಸ್ತೆ ಬದಿಯಲ್ಲಿ ನಡುಗುತ್ತಾ ಕುಳಿತಿತ್ತು. ಮಿಯಾಂ... ಮಿಯಾಂ..."ಅದು ಯಾರನ್ನೋ ಹುಡುಕುತ್ತಿತ್ತು. ಅಮ್ಮನನ್ನೋ...ಮನೆಯನ್ನೋ...ಅಥವಾ ಪ್ರೀತಿಯನ್ನೋ... ರಸ್ತೆಯಲ್ಲಿ ನೂರಾರು ಜನ ಹಾದುಹೋದರು.ಕೆಲವರು ನೋಡಿದರು.ಕೆಲವರು ಕೇಳಿದರು. ಆದರೆ ಯಾರೂ ನಿಲ್ಲಲಿಲ್ಲ.ಬೆಕ್ಕಿನ ಮರಿ ಸುಸ್ತಾಗಿ ಕಣ್ಣು ಮುಚ್ಚಿತು. ಅದೇ ಸಮಯದಲ್ಲಿ...ದೇವರು ಮೃದುವಾಗಿ ನಕ್ಕ."ಇದನ್ನು ರಕ್ಷಿಸಲು ಯಾರನ್ನಾದರೂ ಕಳುಹಿಸಬೇಕು..."ಎಂದುಕೊಂಡ.

ಅವನು ಒಬ್ಬ ಪುಟ್ಟ ಹುಡುಗಿಯ ಹೃದಯದಲ್ಲಿ ಒಂದು ಚಿಕ್ಕ ಕರುಣೆಯ ಕಿಡಿಯನ್ನು ಹೊತ್ತಿಸಿದ.ಆ ಹುಡುಗಿ ಅಮ್ಮನ ಕೈ ಹಿಡಿದು ಅದೇ ರಸ್ತೆಯಲ್ಲಿ ನಡೆಯುತ್ತಿದ್ದಳು. ಹಠಾತ್ತನೆ ಅವಳು ನಿಂತಳು.ಅಮ್ಮ... ಕೇಳಿ.ಯಾರೋ ಅಳುತ್ತಿದ್ದಾರೆ..." ಅಮ್ಮನಿಗೆ ಏನೂ ಕೇಳಿಸಲಿಲ್ಲ. ಆದರೆ ಹುಡುಗಿಯ ಹೃದಯಕ್ಕೆ ಆ ಕೂಗು ಕೇಳಿಸಿತು.ಅವಳು ಶಬ್ದ ಬಂದ ದಿಕ್ಕಿನಲ್ಲಿ ಓಡಿದಳು. ಮಳೆಯ ನೀರಿನಲ್ಲಿ ನಡುಗುತ್ತಿದ್ದ ಪುಟ್ಟ ಬೆಕ್ಕಿನ ಮರಿಯನ್ನು ಕಂಡಳು.ಅದನ್ನು ಎತ್ತಿಕೊಂಡು ತನ್ನ ಎದೆಯೊಡನೆ ಹಚ್ಚಿಕೊಂಡಳು. ಇನ್ನು ನೀನು ಒಬ್ಬಂಟಿಯಲ್ಲ...''ಎಂದು ಕಿವಿಯಲ್ಲಿ ಪಿಸುಗುಟ್ಟಿದಳು.

ಆ ದಿನ... ಬೆಕ್ಕಿಗೆ ಮನೆ ಸಿಕ್ಕಿತು. ಹುಡುಗಿಗೆ ಹೊಸ ಸ್ನೇಹಿತ ಸಿಕ್ಕಿತು.ಅವರಿಬ್ಬರ ಬದುಕೂ ಬದಲಾಯಿತು.ಬೆಕ್ಕಿಗೆ ಪ್ರೀತಿ ಸಿಕ್ಕಿತು.ಹುಡುಗಿಗೆ ಕರುಣೆ ಕಲಿಯಿತು.ಕೆಲವೊಮ್ಮೆ...ದೇವರು ಆಕಾಶದಿಂದ ಇಳಿದು ಬರುವುದಿಲ್ಲ.ಒಂದು ಮಗುವಿನ ಹೃದಯದೊಳಗೆ ಪ್ರೀತಿಯಾಗಿ ಬಂದುದಾರಿ ತಪ್ಪಿದ ಜೀವಗಳಿಗೆ ಮನೆ ತೋರಿಸುತ್ತಾನೆ.

- ಧೀರಜ್ ಬೆಳ್ಳಾರೆ                                  

ಚಿತ್ರ ಕೃಪೆ: ಇಂಟರ್ನೆಟ್ ತಾಣ